Tuesday, January 21, 2025
ಸುದ್ದಿ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಅದ್ದೂರಿ ಗಣೇಶೋತ್ಸವ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ 41 ನೇಯ ಗಣೇಶೋತ್ಸವ ಕಾರ್ಯಕ್ರಮವನ್ನು ವಿಜ್ಙಾನ ಧರ್ಮ ಹಾಗೂ ಯುವಜನತೆ‌ ಎನ್ನುವ ಧ್ಯೇಯ ದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಜಿ ಅಚ್ಯುತ್ತ ನಾಯಕ್ ಮಾತನಾಡಿ, ನಮ್ಮ‌ಸಂಸ್ಥೆಯು ಸುಮಾರು ನಲವತ್ತು ವರ್ಷಗಳಿಂದ ಗಣೇಶೋತ್ಸವವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.ವಿಘ್ನ ವಿನಾಯಕ ನಮ್ಮ ಎಲ್ಲಾ ಕಷ್ಟಗಳನ್ನು ನಿವಾರಿಸಿ ನಮ್ಮ ಜೊತೆ ಸದಾ ಇದ್ದು ನಮಗೆ ಒಳಿತನ್ನು ಉಂಟುಮಾಡಲಿ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಧರ್ಮ ಹಾಗೂ ವಿಜ್ಞಾನದ ಅರಿವು ಮೂಡಿಸುವುದು ಕೂಡ ನಮ್ಮ ಧ್ಯೇಯವಾಗಿದೆ.ಹಾಗಾಗಿ ಏಕದಂತನ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಶುಭಹಾರೈಸಿದರು.

ಆಕರ್ಷಕ ಮೆರವಣಿಗೆ:

ಈ ಸಂದರ್ಭದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ವಿವೇಕಾನಂದ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು,ವಿವೇಕಾನಂದ ಕಾನೂನು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳ ಕುಣಿತ ಭಜನೆ ಹಾಗೂ ಪುತ್ತೂರಿನ ಶ್ರೀರಾಮ ಬಳಗದ ಚೆಂಡೆ ವಾದನ ಆಕರ್ಷಕವಾಗಿತ್ತು