Monday, January 20, 2025
ಸುದ್ದಿ

ಸೆ. 11ರಂದು ಕೆದಿಲದ ಶ್ರೀದೇವೀ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಸೆ. 11ರಂದು ಕೆದಿಲದ ಶ್ರೀದೇವೀ ಭಜನಾ ಮಂದಿರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವಿಟ್ಲ ಪೆರ್ನೆ ವಲಯ, ವಿಟ್ಲ ಯೋಜನಾ ಕಛೇರಿ ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಪೆರ್ನೆ ವಲಯದ ಮಧುರಾ ಮತ್ತು ಜ್ಞಾನಜ್ಯೋತಿ ಜ್ಞಾನ ವಿಕಾಸ ಕೇಂದ್ರ ಕೆದಿಲ ಹಾಗೂ ಕೆದಿಲ ‘ಬಿ’ ಒಕ್ಕೂಟ ಮತ್ತು ಶ್ರೀ ದೇವೀ ಭಜನಾ ಮಂದಿರ ಹಾಗೂ ನವಜೀವನ ಸಮಿತಿ ಕೆದಿಲ ಇದರ ಸಹಯೋಗದಲ್ಲಿ ವೇದ ಮೂರ್ತಿ ಹರಿಪ್ರಸಾದ್ ಭಟ್ ಮುರ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಡಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲಿ ಅಶ್ವಿನಿ ಕೋಡಿಬೈಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಶ್ರೀಮತಿ ಸವಿತಾ ಎಸ್ ಭಟ್ ಹಾಗೂ ಕೇಶವ ನಾೈಕ ಬಡಕ್ಕಿಲ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಇನ್ನು ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ವಿಟ್ಲ ತಾಲೂಕಿನ ಯೋಜನಾಧಿಕಾರಿ ಚೆನ್ನಪ್ಪ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಪೆರ್ನೆಯ ವಲಯಾಧ್ಯಕ್ಷರಾದ ರಾಬರ್ಟ್ ಫೆರ್ನಾಂಡಿಸ್ ಹಾಗೂ ಮತ್ತಿರರು ಭಾಗವಹಿಸಲಿದ್ದಾರೆ.