Monday, January 20, 2025
ದಕ್ಷಿಣ ಕನ್ನಡರಾಜ್ಯರಾಷ್ಟ್ರೀಯಸುದ್ದಿ

ಮಂಗಳೂರಿನಲ್ಲಿ ವೀರ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮನವರ ಹೋರಾಟ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ಮಂಗಳೂರು, ಸೆ 03 : ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿಕೊಳ್ಳಲು ವೀರ ವನಿತೆ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾತ್ರವನ್ನು ಕೊಂಡಾಡಿದರು. ಮಂಗಳೂರು ಬಂದರು 25,000 ಜನರನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಕ್ರೂಸ್ ಟೂರಿಸಂಗೆ ನವ ಮಂಗಳೂರು ಬಂದರು ಸೂಕ್ತವಾಗಿದೆ. ಇದರ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.

ಕರಾವಳಿಯ ಭರಪೂರ ಲಾಭವನ್ನು ನಾವು ಪಡೆಯಬೇಕಿದೆ ಎಂದರು.ʻಕರ್ನಾಟಕ ಸಂಪದ್ಭರಿತ ರಾಜ್ಯ. ವೀರತ್ವಕ್ಕೆ ಹೆಸರುವಾಸಿ. ಇದು ಮೇಧಾವಿಗಳನ್ನು ಸೃಷ್ಟಿಸಿದ ನಾಡು, ತೀರ್ಥಕ್ಷೇತ್ರದ ಬೀಡು ಸಹ ಹೌದು ’ ಎಂದು ʻವೀರ ರಾಣಿಯರಾದ ಅಬ್ಬಕ್ಕ, ಕಿತ್ತೂರು ಚೆನ್ನಮ್ಮನವರ ಹೋರಾಟ ಸ್ಮರಿಸಿದರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿಕೊಳ್ಳಲು ಈ ವೀರ ವನಿತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಇವರೆಲ್ಲರೂ ನಮಗೆ ಪ್ರೇರಣೆʼ ಎಂದು ಹೇಳಿದರು.