Monday, January 20, 2025
ಕ್ರೈಮ್ರಾಷ್ಟ್ರೀಯಸಿನಿಮಾಸುದ್ದಿ

ಕೆಜಿಎಫ್​ನಿಂದ ಪ್ರೇರಿತಗೊಂಡು ನಾಲ್ವರನ್ನ ಕೊಂದ ಯುವಕ! ನೆಕ್ಸ್ಟ್​ ಟಾರ್ಗೆಟ್​ ಪೊಲೀಸರನ್ನ ಕೊಲ್ಲುವುದೇ ಆಗಿತ್ತು..! – ಕಹಳೆ ನ್ಯೂಸ್

ಮಧ್ಯಪ್ರದೇಶ: ಭಾರತ ಚಿತ್ರರಂಗದಲ್ಲೇ ಮೈಲಿಗಲ್ಲು ಸೃಷ್ಟಿಸಿದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಿಂದ ಪ್ರೇರಿತಗೊಂಡ 19 ವರ್ಷದ ಯುವಕನೊಬ್ಬ ನಾಲ್ವರು ಸೆಕ್ಯುರಿಟಿ ಗಾರ್ಡ್​ಗಳನ್ನು ಕೊಂದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಅಮಾನುಷ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

ಆರೋಪಿ ಶಿವಪ್ರಸಾದ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನ ತಡವಾಗಿದ್ದರೆ ಇನ್ನೂ ಹಲವರ ಹತ್ಯೆಯಾಗುತ್ತಿತ್ತು. ಆತನ ಮುಂದಿನ ಟಾರ್ಗೆಟ್​ ಪೊಲೀಸರ ಹತ್ಯೆಯಾಗಿತ್ತಂತೆ!

ಕೆಜಿಎಫ್​​ ಚಿತ್ರದ ಹೀರೊ ಮಾದರಿಯಲ್ಲಿ ಪ್ರಸಿದ್ಧನಾಗಲು ಈ ಕೃತ್ಯ ಎಸಗಿದ್ದಾಗಿ ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ಕೊಲೆ ಮಾಡಿದ ವ್ಯಕ್ತಿಯೊಬ್ಬನಿಂದ ಕದ್ದಿದ್ದ ಮೊಬೈಲ್​ ಫೋನ್​ ಟ್ರ್ಯಾಕ್​ ಮಾಡಿ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್​ಗಳು ಮಲಗಿದ್ದ ವೇಳೆಯಲ್ಲಿ ಶಿವಪ್ರಸಾದ್​ ಈ ಕೃತ್ಯ ಎಸಗಿದ್ದಾನೆ. ಸಾಗರ್​ ಜಿಲ್ಲೆಯಲ್ಲಿ ಮೂವರು, ಭೋಪಾಲ್​ನಲ್ಲಿ ಒಬ್ಬರನ್ನು ಈತ ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಗಾರ್ಡ್​ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ, ನಂತರ ತನ್ನನ್ನು ಯಾರೂ ನೋಡಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಪರಾರಿಯಾಗಿದ್ದಾನೆ.

ಮುಂದಿನ ದಿನಗಳಲ್ಲಿ ಪೊಲೀಸರನ್ನೇ ಹತ್ಯೆ ಮಾಡಲು ಯೋಚಿಸಿದ್ದಾಗಿ ಆರೋಪಿ ಶಿವಪ್ರಸಾದ್​ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಪ್ರಸಿದ್ಧಿಯಾಗಬೇಕು ಎಂಬ ಒಂದೇ ಕಾರಣಕ್ಕೆ ರಾತ್ರಿ ಹೊತ್ತು ನಿದ್ರೆಮಂಪರಿನಲ್ಲಿರುತ್ತಿದ್ದ ಸೆಕ್ಯುರಿಟಿ ಗಾರ್ಡ್​ಗಳನ್ನ ಕಲ್ಲು, ಕಬ್ಬಿಣದ ರಾಡ್​, ಸುತ್ತಿಗೆಯಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡುತ್ತಿದ್ದ. ಯಾರೊಬ್ಬರನ್ನೂ ಲೂಟಿ ಮಾಡಿಲ್ಲ. ಅವನ ಉದ್ದೇಶ ಕೊಲೆ ಮಾಡುವುದಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.