Sunday, January 26, 2025
ಸುದ್ದಿ

ಉಡುಪಿ: ಬಾಡಿಗೆಗೆ ಮನೆ ಕೊಟ್ಟ ಮಹಿಳೆಯನ್ನೇ ಕೊಲೆಗೈದ ಪ್ರಕರಣ- ದಂಪತಿಗೆ ಜೀವಾವಧಿ ಶಿಕ್ಷೆ – ಕಹಳೆ ನ್ಯೂಸ್

ಉಡುಪಿ : ಬಾಡಿಗೆಗೆ ಮನೆ ಕೊಟ್ಟ ಒಂಟಿ ವೃದ್ದೆಯನ್ನು ಕೊಚ್ಚಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳನ್ನು ಅಂಬರೀಶ್ ಯಾನೆ ಶಿವ (31), ರಶೀದಾ ಯಾನೆ ಜ್ಯೋತಿ (26) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ವಿವರ 2019 ಜು.1ರಂದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಂಪತಿ ರತ್ನಾವತಿ ಶೆಟ್ಟಿ ಅವರ ಮನೆಗೆ ಬಾಡಿಗೆ ಬಂದಿದ್ದರು. ಮರುದಿನವೇ ಮನೆಯ ಹಿಂದಿನ ಬಾಗಿಲಿನಿಂದ ಪ್ರವೇಶ ಮಾಡಿ ರತ್ನಾವತಿ ಶೆಟ್ಟಿಯನ್ನು ಮಚ್ಚಿನಿಂದ ಕಡಿದು ಕೊಲೆಗೈದು, 1,95,000 ರು. ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.

3 ದಿನ ತಡವಾಗಿ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಂದಿನ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ ರವರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಗೋವಾದಲ್ಲಿ ಪತ್ತೆ ಮಾಡಿ ಸುಲಿಗೆಯಾಗಿದ್ದ ಬಂಗಾರದ ಒಡವೆಗಳನ್ನು ಆರೋಪಿಗಳಿಂದ ಜಪ್ತಿ ಮಾಡಿ, ಉಡುಪಿ ಜಿಲ್ಲಾ ಮತ್ತು ಸತೃ ನ್ಯಾಯಾಲಯಕ್ಕೆ ದೊಷಾರೋಪಣಾ ಪತ್ರ ಸಲ್ಲಿಸಿದ್ದರು. ಇದೀಗ ಆರೋಪ ಸಾಬೀತಾಗಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರು. ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಶಾಂತಿಬಾಯಿ ಹಾಗೂ ಜಯರಾಮ ಶೆಟ್ಟಿ ಅವರು ವಾದಿಸಿದ್ದರು.