Sunday, November 24, 2024
ಸುದ್ದಿ

ಕಲ್ಲಡ್ಕ :ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಭಜನೆ ಮತ್ತು ಸಾಮೂಹಿಕ ಹುಟ್ಟುಹಬ್ಬ ಆಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಭಜನೆ ಮತ್ತು ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀರಾಮ ಪ್ರೌಢ ಶಾಲೆಯ ಆಂಗ್ಲ ಭಾಷಾ ಶಿಕ್ಷಕಿಯಾದ ಚೈತ್ರಾ ಮಾತಾನಾಡುತ್ತಾ “ಶ್ರೀರಾಮ ಶಾಲೆಯು ದೇವಸ್ಥಾನವಿದ್ದಂತೆ ಇಲ್ಲಿ ನೈತಿಕ ಶಿಕ್ಷಣ ದೊರಕುತ್ತದೆ.

ಹುಟ್ಟುಹಬ್ಬ ಎನ್ನುವುದೇ ಸಂಭ್ರಮ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುವ ಈ ಕಾಲಘಟ್ಟದಲ್ಲಿ ಒಟ್ಟಾಗಿ ಹುಟ್ಟುಹಬ್ಬ ಆಚರಿಸುತ್ತಿರುವುದು ವಿಶೇಷ. ಹುಟ್ಟುಹಬ್ಬ ಆಚರಿಸುವ ಮಕ್ಕಳು ಶ್ರದ್ಧಾನಿಧಿ ಅರ್ಪಿಸುತ್ತಾರೆ. ಆ ಹಣ ಸಮಾಜದ ಒಳಿತಿಗಾಗಿ ಅಂದರೆ ನಿರಾಶ್ರಿತರಿಗೆ ಕೊಡುತ್ತಾರೆ, ಇದಕ್ಕಿಂತ ಪುಣ್ಯದ ಕೆಲಸ ಬೇರೊಂದು ಇಲ್ಲ. ಹಾಗೆಯೇ ಪ್ರತಿ ಮನೆಯಲ್ಲೂ ದಿನನಿತ್ಯ ಭಜನೆ ಮಾಡಬೇಕು. ಭಕ್ತರು ಕೂತು ಭಜನೆ ಮಾಡಿದರೆ ಭಗವಂತ ನಿಂತು ಕೇಳುತ್ತಾನೆ, ನಿಂತು ಮಾಡಿದರೆ ಕುಣಿದು ಕೇಳುತ್ತಾನೆ. ಕುಣಿದು ಮಾಡಿದರೆ ನಮ್ಮೊಳಗೆ ಸೇರುತ್ತಾನೆ. ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.” ಎಂದು ಭಜನೆ ಹಾಗೂ ಹುಟ್ಟುಹಬ್ಬದ ಮಹತ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ, ತಿಲಕಧಾರಣೆ ಮಾಡಿ ಸಿಹಿ ನೀಡಿದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚಣೆ ಮಾಡಿ, ನಿಧಿ ಸಮರ್ಪಿಸಿ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಬಹುಮಾನ ವಾಚನವನ್ನು ಅಧ್ಯಾಪಕರಾದ ರೇಷ್ಮಾ ಗೌಡ, ಪ್ರೀತಾ, ಮತ್ತು ರಮ್ಯ ಜೆ ವಾಚಿಸಿದರು.

ವೇದಿಕೆಯಲ್ಲಿ ಹೂಹಾಕುವ ಕಲ್ಲಿನ ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪೂವಪ್ಪ ಟೈಲರ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಮತ್ತು ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಜಯರಾಮ ನೀರಪಾದೆ, ಶ್ರೀ ರಾಮ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕಿನ ಅಧ್ಯಕ್ಷ ಕುಲ್ಯಾಡಿ ನಾರಾಯಣ ಶೆಟ್ಟಿ ಹಾಗೂ ಮುಖೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಲಿಪಿ ಸ್ವಾಗತಿಸಿ, ಸುಕೇಶ್ ನಿರೂಪಿಸಿ, ದರ್ಶನ್ ವಂದಿಸಿದರು.