Sunday, November 24, 2024
ಸುದ್ದಿ

ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ – ಕಹಳೆ ನ್ಯೂಸ್

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ ಸುಭಿಕ್ಷಾ ಸುಬ್ರಮಣಿ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಇವರು ಕಳೆದ ಆರು ವರ್ಷಗಳಿಂದ ತಾವು ಸಂಬಂಧ ಹೊಂದಿದ್ದ ಬಾಂಗ್ಲಾದೇಶದ ಮಹಿಳೆ 35 ವರ್ಷದ ಟೀನಾ ಅವರನ್ನು ವರಿಸಿದ್ದಾರೆ.

ಇವರಿಬ್ಬರ ವಿವಾಹಕ್ಕೆ ಮೊದಲು ವಿರೋಧ ಕೇಳಿ ಬಂದಿತ್ತಾದರೂ ಬಳಿಕ ಇವರುಗಳ ದೃಢ ನಿರ್ಧಾರಕ್ಕೆ ಮಣಿದು ಕುಟುಂಬಸ್ಥರು ಸಮ್ಮತಿಸಿದ್ದಾರೆ. ಟೀನಾ ಈ ಮೊದಲೇ ಒಂದು ವಿವಾಹವಾಗಿದ್ದು, ಬಳಿಕ ಪತಿಯನ್ನು ತ್ಯಜಿಸಿ ಮಾಂಟ್ರಿಯಲ್ ನಲ್ಲಿ ನೆಲೆಸಿದ್ದಾರೆ.

ಬುಧವಾರದಂದು ನಡೆದ ವಿವಾಹ ಸಂದರ್ಭದಲ್ಲಿ ಸಂಸ್ಕೃತ ವಿದ್ವಾಂಸ ಮತ್ತು ಶಿಕ್ಷಕ ಸೌರಭ್, ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸುಭಿಕ್ಷಾ ಅವರ 84 ವರ್ಷದ ಅಜ್ಜಿ ಪದ್ಮಾವತಿಯವರೂ ಸಹ ಈ ವಿವಾಹಕ್ಕೆ ತಮ್ಮ ಸಮ್ಮತಿ ಸೂಚಿಸಿದ್ದಾರೆ.