Friday, January 24, 2025
ಸುದ್ದಿ

ಸ್ಥಳ ಮಹಜರ್ ವೇಳೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಮುರುಘಾ ಶ್ರೀ, ಮಠದಲ್ಲಿ ಸ್ವಾಮೀಜಿ ಕಂಡು ಕಣ್ಣೀರಿಟ್ಟ ಶಿಷ್ಯವೃಂದ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದುರ್ಗ: ಇಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೋಕ್ಸೋ ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಮಠಕ್ಕೆ ಕರೆದೊಯ್ದಿದ್ದಾರೆ. ಮುರುಘಾ ಮಠಕ್ಕೆ ತೆರಳಿದಂತೆ ಸ್ಥಳ ಮಹಜರ್ ವೇಳೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಲ್ಲದೇ ಅವರನ್ನು ಮಠದಲ್ಲಿ ಕಂಡಂತ ಅವರ ಶಿಷ್ಯವೃಂದವು, ಸ್ವಾಮೀಜಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿರೋದಾಗಿ ತಿಳಿದು ಬಂದಿದೆ.

ಪೋಕ್ಸೋ ಕೇಸ್ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯ ಪೊಲೀಸರು ಮುರುಘಾ ಶ್ರೀಗಳನ್ನು ಸ್ಥಳ ಮಹಜರಿಗಾಗಿ ಮುರುಘಾ ಮಠಕ್ಕೆ ಕರೆದೊಯ್ಯಲಾಯಿತು. ಮುರುಘಾ ಮಠದಲ್ಲಿ ಗದ್ದುಗೆ, ಪೂಜಾ ಸ್ಥಳಗಳಿಗೆ ತೆರಳಿ, ಮುರುಘಾ ಶರಣರು ನಮಸ್ಕರಿಸಿದರು.

ಸ್ವಾಮೀಜಿ ಬಳಸುತ್ತಿದ್ದ ಎಲ್ಲಾ ಕೊಠಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ಥಳ ಮಹಜರ್ ನಡೆಸಲಾಯಿತು. ಮಠದ ಕಚೇರಿಗೆ ಕೂಡ ಭೇಟಿ ನೀಡಲಾಯಿತು. ಸ್ಥಳ ಮಹಜರ್ ವೇಳೆಯಲ್ಲಿ 15ಕ್ಕೂ ಹೆಚ್ಚು ಸ್ವಾಮೀಜಿಗಳಿದ್ದರು.

ಮುರುಘಾ ಶ್ರೀಗಳನ್ನು ಕಂಡೊಡನೆ ಮಠದಲ್ಲಿ ಅವರ ಶಿಷ್ಯವೃಂದವು ಕಣ್ಣೀರಿಟ್ಟಿದೆ ಎನ್ನಲಾಗಿದೆ. ಈ ವೇಳೆ ಮಠದಲ್ಲಿ ಎಲ್ಲರನ್ನು ಕಂಡಂತ ಸ್ವಾಮೀಜಿಗಳು ಭಾವುಕರಾದರು ಎನ್ನಲಾಗಿದೆ.

ಸತತ ಒಂದೂವರೆ ಗಂಟೆಗಳ ಕಾಲ ಮಾಹಿತಿಯನ್ನು ಎಸ್ಪಿ, ಡಿವೈಎಸ್ಪಿ ಸ್ಥಳ ಮಹಜರ್ ವೇಳೆಯಲ್ಲಿ ಪಡೆದಿದ್ದಾರೆ. ಇದಲ್ಲದೇ ಅವರ ವಾಸ್ತವ್ಯದ ಕೊಠಡಿಗೆ ಕರೆದೊಯ್ದು ಕೂಡ ಮುರುಘಾ ಶರಣರಿಂದ ಮಾಹಿತಿಯನ್ನು ಪಡೆದಿದ್ದಾರೆ ಪೊಲೀಸರು ಎಂದು ತಿಳಿದು ಬಂದಿದೆ. ಈ ಎಲ್ಲಾ ಘಟನೆಯಿಂದ ಮಾನಸಿಕವಾಗಿ ಮುರುಘಾ ಶ್ರೀ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಮಠದಲ್ಲಿನ ಸ್ಥಳ ಮಹಜರ್ ಮುಕ್ತಾಯಗೊಂಡಿದ್ದು, ವಾಪಾಸ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.