ಕರಾವಳಿ ನಗರಿ ಮಂಗಳೂರು ಬಳಿಕ ದೊಡ್ಡಬಳ್ಳಾಪುರದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸೆಪ್ಟೆಂಬರ್ 8ರಂದು ಬಿಜೆಪಿಯ ಐತಿಹಾಸಿಕ ” ಜನೋತ್ಸವ ” – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ. ಪಿ. ನಡ್ಡಾ ಭಾಗಿ ; 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ – ಕಹಳೆ ನ್ಯೂಸ್
ಬೆಂಗಳೂರು: ಬಯಲು ಸೀಮೆನಾಡಿನಲ್ಲಿ ಈಗ ಕೇಸರಿಯ ರಂಗು. ಪ್ರತಿಯೊಬ್ಬರ ಮನದಲ್ಲೂ ಬಿಜೆಪಿಯ ಸಾಧನೆಯ ಮಾತು. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಜನತೆಗೆ ಇದು ಐತಿಹಾಸಿಕ ಕ್ಷಣ. ಸರ್ಕಾರದ 3 ವರ್ಷದ ಸಾಧನೆ ಏನು ಅನ್ನುವುದನ್ನು ಜನರು ಈಗಲೇ ತಿಳಿದಿದ್ದಾರೆ.
ಹೀಗಾಗಿ ಜನರೇ ಆಚರಿಸುವ ಸಂಭ್ರಮ ಇದಾಗಿದೆ. ವಿರೋಧ ಪಕ್ಷಗಳದ್ದು ವ್ಯಕ್ತಿ ಉತ್ಸವವಾಗಿದ್ದರೆ, ನಮ್ಮದು ಜನರೇ ಆಚರಿಸುವ ಜನೋತ್ಸವ.
ಬಯಲುಸೀಮೆ ಅಂದರೆ ಅದು ಕರ್ನಾಟಕದ ವಿಶೇಷ ಪ್ರದೇಶ. ಸಾಧಕರು ಮತ್ತು ಅದ್ವಿತೀಯ ವ್ಯಕ್ತಿಗಳು ಹುಟ್ಟಿರುವುದು ಇಲ್ಲೇ. ನಾಡಪ್ರಭು ಕೆಂಪೇಗೌಡರು ಜನಿಸಿದ ಪುಣ್ಯಭೂಮಿ. ಸರ್ ಎಂ.ವಿಶ್ವೇಶ್ವರಯ್ಯ ಅವರಂತಹ ಭಾರತರತ್ನಕ್ಕೆ ಜನ್ಮ ನೀಡಿದ ನಂದಿಯ ಬೀಡು ಚಿಕ್ಕಬಳ್ಳಾಪುರ. ಸಿಲ್ಕ್, ಮಿಲ್ಕ್ ಮತ್ತು ಚಿನ್ನಕ್ಕೆ ಪ್ರಸಿದ್ಧವಾಗಿರುವ ಚಿನ್ನದ ನಾಡು ಕೋಲಾರ ಇದೇ ಬಯಲುಸೀಮೆಯಲ್ಲಿದೆ. ಕನ್ನಡದ ಭಗವದ್ಗೀತೆ ರಚಿಸಿದ ಡಿವಿ ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಂತಹ ಕವಿ ಶ್ರೇಷ್ಠರನ್ನು ನೀಡಿದ ನೆಲೆವೀಡು. ಕಾಲಜ್ಞಾನಿ ಯೋಗಿನಾರೇಯಣ ಕೈವಾರ ತಾತಯ್ಯನವರ ತಪೋಭೂಮಿ ನಮ್ಮ ಬಯಲುಸೀಮೆ.
ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಸಂಭ್ರಮದಲ್ಲಿದೆ. ಕರ್ನಾಟಕದಲ್ಲಿ ಹಲವು ರಾಜಕೀಯ ಉತ್ಸವಗಳು ನಡೆದಿವೆ. ಆದರೆ ಅವುಗಳಲ್ಲೆಲ್ಲ ಅಧಿಕಾರದ ದಾಹ ಕಾಣುತ್ತಿತ್ತು. ಚುನಾವಣೆಯಲ್ಲಿ ಅಧಿಕಾರಕ್ಕೇರುವ ಹಗಲು ಕನಸಿತ್ತು. ಆದರೆ ಈ ಉತ್ಸವ ಬಿಜೆಪಿಯ ಉತ್ಸವ ಅಲ್ಲ. ಇದು ಜನರೇ ನಡೆಸಿಕೊಡುವ ಜನೋತ್ಸವ. ಜನರಿಗೆ ಸರ್ಕಾರ ಕೊಟ್ಟಿರುವ ಸಾರ್ಥಕ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಹೆಜ್ಜೆಗಳನ್ನು ಸಂಭ್ರಮಿಸುವ ಜನೋತ್ಸವ.
ಸರ್ಕಾರದ ಸಾಧನೆಯ ಉತ್ಸವ ಇದಾಗಿದೆ. ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗಿಯಾಗುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಇದು ನೆರವು ನೀಡಲಿದೆ. ಜನತೆ ಸರ್ಕಾರ ಮತ್ತು ಪಕ್ಷದ ಮೇಲಿಟ್ಟಿರುವ ವಿಶ್ವಾಸದ ಪ್ರತಿರೂಪ ಇದಾಗಿರಲಿದೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಜನರ ಆಶಯ ಮತ್ತು ಅಭಿವೃದ್ಧಿಯ ಕನಸುಗಳಿಗೆ ಸರ್ಕಾರ ಸ್ಪಂದಿಸಿದೆ. ಇದು ಯಾವುದೇ ರಾಜಕೀಯ ಉತ್ಸವವಲ್ಲ. ನಾಯಕರ ವೈಯಕ್ತಿಕ ಕಾರ್ಯಕ್ರಮವಲ್ಲ. ಇದು ಪ್ರಜಾಪ್ರಭುತ್ವದ ಆಶಯದಲ್ಲಿ ಜನರಿಂದ ಜನರಿಗೋಸ್ಕರ ನಡೆಯುತ್ತಿರುವ ಕಾರ್ಯಕ್ರಮ. ಜನರೇ ಸೇರಿಕೊಂಡು ಮಾಡುವ ಈ ಉತ್ಸವದಲ್ಲಿ 2 ರಿಂದ 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.
| ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ವಿಷನ್ ಕರ್ನಾಟಕ: ರಾಜ್ಯದ ಆರೋಗ್ಯ ಕ್ಷೇತ್ರದ ಭವಿಷ್ಯ ಗಮನದಲ್ಲಿಟ್ಟುಕೊಂಡು ಸರ್ಕಾರ ದೇಶದಲ್ಲೇ ಮೊಟ್ಟ ಮೊದಲಬಾರಿಗೆ ಐತಿಹಾಸಿಕವಾಗಿ ‘ಕರ್ನಾಟಕ ವಿಷನ್ ವರದಿ’ ಜಾರಿ ಮಾಡಿದೆ. 250ಕ್ಕೂ ಹೆಚ್ಚು ತಜ್ಞರ ಅಭಿಪ್ರಾಯ ಪಡೆದು, 1 ವರ್ಷ ಅಧ್ಯಯನ ಮಾಡಿ ಈ ವರದಿನ ರೂಪಿಸಲಾಗಿದೆ. ಇದು ಆರೋಗ್ಯ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಲಿದೆ. ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. 48 ಲಕ್ಷ ರೈತ ಬಂಧುಗಳಿಗೆ ವರ್ಷಕ್ಕೆ 10,000 ರೂಪಾಯಿ ನೀಡುವ ರೈತ ಸಮ್ಮಾನ್ ನಿಧಿ ಉತ್ಸವವನ್ನು ಆರಂಭಿಸಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 10 ಕೋಟಿ ಜನರಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಿದೆ. ಹೀಗಾಗಿ ಇದು ಉಜ್ವಲ ಉತ್ಸವವೂ ಹೌದು. 10 ಕೋಟಿ ಶೌಚಗೃಹ ನಿರ್ವಿುಸುವ ಸ್ವಚ್ಛ ಭಾರತ ಉತ್ಸವವೂ ಡಬಲ್ ಎಂಜಿನ್ ಸರ್ಕಾರದ ಸಾಧನೆಯ ಕೆಲ ಮೆಟ್ಟಿಲುಗಳು. ಈ ಹಿಂದೆ 5 ವರ್ಷ ಕಳೆದರೂ 30 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ವಣವಾಗಬೇಕಿದ್ದರೆ ಹರಸಾಹಸ ಪಡಬೇಕಿತ್ತು. ಆದರೆ ಈಗ ದಿನಕ್ಕೆ 30ಕಿಮೀ ಹೆದ್ದಾರಿ ನಿರ್ವಿುಸುವ ಮೂಲಸೌಕರ್ಯ ಉತ್ಸವ ನಡೆಯುತ್ತಿದೆ. ಪ್ರತೀ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸುವ ಜಲಜೀವನ ಉತ್ಸವ ದೇಶಾದ್ಯಂತ ನಡೆಯುತ್ತಿದೆ. 3 ಕೋಟಿ ಬಡ ಕುಟುಂಬಗಳಿಗೆ ಸ್ವಂತ ಸೂರು ನೀಡಿರುವ ಪ್ರಧಾನ ಮಂತ್ರಿ ಆವಾಸ ಯೋಜನೆಯೂ ಅದ್ಭುತ ಪರಿ ಕಲ್ಪನೆಗಳು.
ಆಯುಷ್ಮಾನ್ ಭಾರತ್ ಮೂಲಕ ದೇಶದ ಎಲ್ಲ ಜನರಿಗೂ ಆರೋಗ್ಯ ವಿಮೆ ನೀಡಲಾಗುತ್ತಿದೆ. 5 ಲಕ್ಷ ರೂ. ವೈಯಕ್ತಿಕ ಆರೋಗ್ಯ ವಿಮೆಯನ್ನು ವಿಶ್ವದ ಯಾವುದೇ ದೇಶಗಳು ನೀಡಿಲ್ಲ. ಆದರೆ ಕೇಂದ್ರ ಸರ್ಕಾರ ನೀಡುತ್ತಿದೆ. 7 ಹೊಸ ಐಐಟಿ, 7 ಹೊಸ ಐಐಎಂ, 15 ಹೊಸ ಐಐಐಟಿ, 12 ಹೊಸ ಏಮ್್ಸ, 66 ಹೊಸ ವಿಮಾನ ನಿಲ್ದಾಣಗಳು, 2.5 ಲಕ್ಷ ಕಿಮೀ ಗ್ರಾಮೀಣ ರಸ್ತೆ, 73,000 ಕಿಮೀ ರಾಷ್ಟ್ರೀಯ ಹೆದ್ದಾರಿ, ಇದು ಬಿಜೆಪಿಯ ಅಭಿವೃದ್ಧಿ ಉತ್ಸವ. ಹೀಗಾಗಿಯೇ ಇದು ಜನೋತ್ಸವವಾಗಿ ಮಾರ್ಪಾಡಾಗಿದೆ. ಜನರ ಮುಂದೆ ವೋಟು ಕೇಳುವ ಧೈರ್ಯವಿರುವುದು ಬಿಜೆಪಿಗೆ ಮಾತ್ರ. ಅಭಿವೃದ್ಧಿ ಅಜೆಂಡಾಗಳು ಮತ್ತು ಅಭಿವೃದ್ಧಿ ಮಾರ್ಕ್ಸ್ ಕಾರ್ಡ್ ನಮ್ಮ ಜತೆಗಿದೆ. ಹೀಗಾಗಿ ದೊಡ್ಡಬಳ್ಳಾಪುರ ಮಾತ್ರವಲ್ಲ ದೇಶದ ಯಾವುದೇ ಭಾಗದಲ್ಲಿ ಉತ್ಸವ ನಡೆಸಿದರೂ ಅದು ಜನೋತ್ಸವವಾಗುತ್ತದೆ.
ಸರ್ಕಾರದ ಸಾಧನೆ ಮೆಚ್ಚಿದ ಜನರು: ಪಕ್ಷ ಬಲಿಷ್ಠವಾಗಿರುವ ಕಡೆಗಳಲ್ಲಿ ಸುಲಭವಾಗಿ ಉತ್ಸವ ಮಾಡಬಹುದು. ಆದರೆ, ಬಿಜೆಪಿ ತನಗೆ ನೆಲೆ ಇಲ್ಲದಿರುವ ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಜನೋತ್ಸವ ಹಮ್ಮಿಕೊಂಡಿದೆ. ರಾಜಕೀಯ ಉತ್ಸವ ಅಲ್ಲದೇ ಇರುವ ಕಾರಣದಿಂದ ಇಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಗಳ ಫಲಾನುಭವಿಗಳು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜನರು ಸೇರಿಕೊಂಡು ಉತ್ಸವ ಮಾಡುತ್ತಿದ್ದಾರೆ. ಸರ್ಕಾರದ ಸಾಧನೆಗಳನ್ನು ನಾವು ಹೇಳುವುದು ದೊಡ್ಡ ಮಾತಲ್ಲ. ಆದರೆ ಜನರೇ ಹೇಳುತ್ತಿರುವುದು ಸರ್ಕಾರದ ಸಾಧನೆಗೆ ಹಿಡಿದ ಕೈ ಗನ್ನಡಿ. ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ. ಯಾಕೆಂದರೆ ಅವರಿಗೆ ಅಭಿವೃದ್ಧಿ ಬೇಕಿಲ್ಲ. ಆದರೆ ಜನರು ಎಂದೂ ಸುಳ್ಳು ಹೇಳುವುದಿಲ್ಲ. ಸರ್ಕಾರದ ಸಾಧನೆ ಮೆಚ್ಚಿ ಈ ಉತ್ಸವ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕರಾವಳಿ ನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಕರಾವಳಿಯಲ್ಲಿ ಸೇರಿದ ಜನಸ್ತೋಮ ನೋಡಿ ವಿರೋಧಿಗಳಿಗೆ ನಡುಕ ಶುರುವಾಗಿದೆ. ಬಿಜೆಪಿ ಭದ್ರಕೋಟೆಯಲ್ಲಿ ಜನರನ್ನು ಸೇರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಮಾತನಾಡುತ್ತಿವೆ. ಆದರೆ ಈಗ ಅವರ ಬಳಿ ಉತ್ತರವೇನಿದೆ? ಯಾಕೆಂದರೆ ಜನೋತ್ಸವ ನಡೆಯುತ್ತಿರುವುದು ದೊಡ್ಡಬಳ್ಳಾಪುರದ ತಾಲೂಕಿನ ತಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ. ಈ ಕಾರ್ಯಕ್ರಮದಲ್ಲಿ ಕನಿಷ್ಠ 2 ರಿಂದ 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಗಳಿವೆ.
ಅಭಿವೃದ್ಧಿ ಪಥದಲ್ಲಿ ಡಬಲ್ ಇಂಜಿನ್ ಸರ್ಕಾರ: ಡಬಲ್ ಇಂಜಿನ್ನ ಬಿಜೆಪಿ ಸರ್ಕಾರ, ‘ಕಾಮನ್ ಮ್ಯಾನ್’ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವೇಗವಾಗಿ ಸಾಗುತ್ತಿದೆ. ಅಭಿವೃದ್ಧಿಯ ಹೊಸ ಮೈಲುಗಲ್ಲುಗಳನ್ನು ಸೃಷ್ಟಿ ಮಾಡುತ್ತಿದೆ. ದೂರದೃಷ್ಟಿಯ ನಾಯಕತ್ವ. ‘ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ವಣ’ ಅನ್ನೋ ಒಂದು ಧ್ಯೇಯದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಾರ್ಯ ನಡೆಯುತ್ತಿದೆ. ರೈತರು, ಪರಿಶಿಷ್ಟ ಜಾತಿ ಹಾಗೂ ಪಂಗಡವರು, ವಿಶೇಷಚೇತನರು, ವೃದ್ಧರು, ಅಲ್ಪಸಂಖ್ಯಾತರು ಹೀಗೆ ಎಲ್ಲ ಜನವರ್ಗಗಳ ನಾಡಿಮಿಡಿತ ಅರಿತು ಅವರು ಜನ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ.
ಮೂರು ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರ ತಂದಾಗ ಅವರ ಮುಂದೆ ಅನೇಕ ಸವಾಲುಗಳಿತ್ತು. ಪ್ರವಾಹ ಬಂದು ಜನತೆ ಸಂಕಷ್ಟದಲ್ಲಿದ್ದಾಗ ಏಕ ವ್ಯಕ್ತಿ ಸಂಪುಟದ ಹಾಗೆ ಕೆಲಸ ಮಾಡಿದರು. ಸಚಿವ ಸಂಪುಟ ರಚನೆ ಮಾಡಿ ಅಭಿವೃದ್ಧಿಗೆ ವೇಗ ನೀಡಿದರು. ಆಗಲೇ ಕೋವಿಡ್ ಸಂಕಷ್ಟ ಶುರು ಆಗಿ ಆರೋಗ್ಯದ ತುರ್ತು ಪರಿಸ್ಥಿತಿ, ಆರ್ಥಿಕ ಸಂಕಷ್ಟ ಉಂಟಾಯಿತು. ಸವಾಲುಗಳು ಬಂದರೂ ಕೇಂದ್ರ ಸರ್ಕಾರದ ಸೂಚನೆಯಂತೆ ಲಾಕ್ಡೌನ್ ಮತ್ತು ಅನೇಕ ನಿರ್ಬಂಧಗಳನ್ನು ವಿಧಿಸಿ ಕರೊನಾ ಕಂಟ್ರೋಲ್ ಮಾಡಲಾಯಿತು. ಕನಸಿನಲ್ಲೂ ನೋಡದ ಕಾಯಿಲೆಗಳಿಗೆ ಸರ್ಕಾರ ಸ್ಪಂಧಿಸಿದ ಬಗ್ಗೆ ವಿರೋಧ ಪಕ್ಷಗಳ ನಾಯಕರು ಒಂದೇ ಒಂದು ಹೊಗಳಿಕೆ ಮಾತುಗಳನ್ನಾಡಲಿಲ್ಲ. ಬದಲಾಗಿ ದೂರದಲ್ಲಿ ಕುಳಿತುಕೊಂಡು ಟೀಕೆ ಮಾಡಿದರು. ಜನರಿಗೆ ಲಸಿಕೆ ವಿತರಣೆ ಮಾಡುವಾಗ ಇದು ಅಪಾಯಕಾರಿ ಅಂತ ಬಿಂಬಿಸುವ ಪ್ರಯತ್ನ ಮಾಡಿದರು. ಸರ್ಕಾರ ಜನರ ಪ್ರಾಣ ಕಾಪಾಡುವ ಜತೆಗೆ ನೀಚ ರಾಜಕಾರಣವನ್ನು ಕೂಡ ನಿಭಾಯಿಸುವ ಅನಿವಾರ್ಯತೆ ಎದುರಿಸಿತ್ತು. ಆದರೆ ಜನರು ಸರ್ಕಾರದ ಜತೆ ಕೈ ಜೋಡಿಸಿದರು. ಲಸಿಕೆಯನ್ನು ಪಡೆದು ವಿರೋಧ ಪಕ್ಷಗಳ ಮುಖಕ್ಕೆ ಮಂಗಳಾರತಿ ಮಾಡಿದರು.
ಕೋವಿಡ್ನಿಂದಾಗಿ ಸಾಮಾನ್ಯ ಜನರು ಅನೇಕ ಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು 1700 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಹಾಸಿಗೆಗಳ ಸಾಮರ್ಥ್ಯವನ್ನು 2 ರಿಂದ 3 ಪಟ್ಟು ಹೆಚ್ಚು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್ ಕಡಿಮೆಯಾಗುತ್ತಾ ಬಂದ ಹಾಗೆ ಸರ್ಕಾರ ಆರೋಗ್ಯ ವಲಯವನ್ನು ಇನ್ನಷ್ಟು ಬಲ ಪಡಿಸುತ್ತಿದೆ.