ಸರಕಾರಿ ಪ್ರಾಥಮಿಕ ಶಾಲೆ ಮಜಿಯಲ್ಲಿ ನಡೆದ ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2021 -22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ – ಕಹಳೆ ನ್ಯೂಸ್
ಕಲ್ಲಡ್ಕ : ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2021 -22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸರಕಾರಿ ಪ್ರಾಥಮಿಕ ಶಾಲೆ ಮಜಿ, ವೀರಕಂಬ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ವೀರಪ್ಪ ಮೂಲ್ಯ ಬೆತ್ತಸರವು ಇವರ ಅಧ್ಯಕ್ಷತೆಯಲ್ಲಿ ಜರಗಿತ್ತು.
ಸದರಿ ಸಾಲಿನಲ್ಲಿ ಸಂಘದ ಸದಸ್ಯರಿಗೆ 25 ಶೇಕಡ ಡಿವಿಡೆಂಟ್ ಘೋಷಿಸಲಾಯಿತು. ಕೆಎಂಎಫ್ ವಿಸ್ತರಣೆಧಿಕಾರಿ ಶ್ರೀಯುತ ಜಗದೀಶ್ ರವರು ಲಾಭದಾಯಕ ಹೈನುಗಾರಿಕೆ , ಗುಣಮಟ್ಟದ ಹಾಲು ಪೂರೈಕೆ ,ಸರಕಾರ ಹಾಗೂ ಕೆಎಂಎಫ್ ನಿಂದ ಹೈನುಗಾರಿಕಾ ರೈತರಿಗೆ ಸಿಗುವ ಸವಲತ್ತುಗಳು, ಹೈನುಗಾರಿಕಾ ಪಶು ಗಳಿಗೆ ಸಿಗುವ ಜೀವ ವಿಮೆ ಭದ್ರತೆ ಇವುಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸಿದರು .ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಹಾಗೂ ಸಂಘಕ್ಕೆ ಹಾಲು ಪೂರೈಸುವ ಸದಸ್ಯರಿಗೆ ಪ್ರೋತ್ಸಾಹಕರ ಉಡುಗೊರೆ ನೀಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೆಎಂಎಫ್ ನ ವಿಟ್ಲವಲಯ ವಿಸ್ತರಣಾ ಅಧಿಕಾರಿ ಶ್ರೀಮತಿ ಪ್ರಪುಲ್ಲ ಪಿ ಎ, ಸಂಘದ ಉಪಾಧ್ಯಕ್ಷ ಶ್ರೀಮತಿ ತೇಜಾಕ್ಷಿ, ನಿರ್ದೇಶಕರುಗಳಾದ ಪದ್ಮನಾಭ ಬಂಗೇರ ಮಜಿ, ನಾರಾಯಣ ಮೂಲ್ಯ ಬೆತ್ತಸರವು ,ಜಯಶೀಲ ಆಳೃ, ಉಮೇಶ್ ಎನ್ ಮಜಿ, ಶ್ರೀಮತಿ ಉಮಾವತಿ, ಕೇಶವ ನಾಯ್ಕ ಕೆಮ್ಮಟೆ, ಆನಂದ ಮೂಲ್ಯ ಮೈರಾ, ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ಬಂಗೇರ ಸ್ವಾಗತಿಸಿ ಸಂಘದ ವರದಿ ವಾಚಿಸಿದರು. ಸಿಬ್ಬಂದಿ ಶ್ರೀಮತಿ ವೀಣಾ ಸಹಕರಿಸಿದರು.