Friday, September 20, 2024
ಸುದ್ದಿ

Breaking News : ಪುತ್ತೂರಿನ ಬಂಗಾರದ ಮನುಷ್ಯ ಜಿ.ಎಲ್ ಆಚಾರ್ಯ ಇನ್ನು ನೆನಪು ಮಾತ್ರ – ಕಹಳೆ ನ್ಯೂಸ್

ಜುಲೈ 13: ಪುತ್ತೂರಿನ ,ವ್ಯವಹಾರ ಲೋಕದ ದಿಗ್ಗಜ್ಜ ಎಂದೇ ಗುರುತಿಸಿಕೊಂಡಿದ್ದ , ಸ್ವರ್ಣಧ್ಯೋಮದಲ್ಲಿ ಹೊಸ ಶಕೆಯನ್ನು ಬರೆದ, ವಿವೇಕಾನಂದ ವಿಧ್ಯಾವರ್ಧಕ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಗುಂಡಿ ಬೈಲು ಲಕ್ಷ್ಮೀನಾರಾಯಣ ಆಚಾರ್ಯ ಇಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ.

ಅವರು ಜನಮಾನಸದಲ್ಲಿ ಜಿ.ಎಲ್ ಆಚಾರ್ಯ ಎಂದೇ ಪರಿಚಿತರಾಗಿದ್ದರು.  ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತಿದ್ದರು.ಮೃತರು  ಪತ್ನಿ, ಪುತ್ರ ಮೊಮ್ಮಕ್ಕಳು ಅಪಾರ ಬಂಧು ಮಿತ್ರರನ್ನು ನ್ನು ಅಗಲಿದ್ದಾರೆ 1957ರಲ್ಲಿ 10೦ ಚದರ ಆಡಿಯ ಅಂಗಡಿಯಲ್ಲಿ ಜಿ.ಎಲ್ ಚಿನ್ನಾಭರಣ ಮಳಿಗೆಯನ್ನು ಉದ್ಯಮವನ್ನು ಪ್ರಾರಂಭಿಸಿದ್ದರು. ಪ್ರಸ್ತುತ ಜಿ ಎಲ್ ಸಂಸ್ಥೆಯೂ ಸುಳ್ಯ, ಪುತ್ತೂರು, ಹಾಸನ, ಕುಶಾಲನಗರ ಶೋ ರೂಂನ್ನು  ಹೊಂದಿದೆ. ವ್ಯವಹಾರದಲ್ಲಿ ಅವರು ಅಳವಡಿಸಿಕೊಂಡಿದ್ದ ನೇರವಂತಿಕೆ, ಪ್ರಾಮಾಣಿಕತೆ , ರಾಜಿಯಿಲ್ಲದ ಗುಣಮಟ್ಟ ಹಾಗೂ ನಿಖರ ಬೆಲೆಯಿಂದ ಬಹು ಬೇಗ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿದ್ದರು.ನಂಬಿಕೆ, ನಿಷ್ಕಳಂಕ,ಶುದ್ದತೆ, ಹೊಸ ಡಿಸೈನ್, ಗ್ರಾಹಕ ಸ್ನೇಹಿ ಯಿಂದ ಜಿ.ಎಲ್ ಉದ್ಯಮ ನಿರಂತರ ಬೆಳವಣಿಗೆಯನ್ನು ಹೊಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪ್ರಥಮ ಪೂರ್ತಿ ಎಸಿ ಶೋರುಮ್ 1989ರಲ್ಲಿ ಪುತ್ತೂರಿನಲ್ಲಿ ಆರಂಭಿಸಲಾಯಿತ್ತು. ಬಿಐಎಸ್ ಹಾಲ್ ಮಾರ್ಕ್ ಹೊಂದಿದ ಪ್ರಥಮ ಪುತ್ತೂರಿನ ಶೋರುಮ್  ಆಗಿಯೂ ಅದು ಗುರುತಿಸಿಕೊಂಡಿದೆ.’ಧರಿಸಲು ಸಿದ್ದವಾದ’ (ರೆಡಿಮೇಡ್ ಗೋಲ್ಡ್) ಬಂಗಾರವನ್ನು ಮೊದಲು ದಕ್ಷಿಣ ಕನ್ನಡದಲ್ಲಿ ಪ್ರಾರಂಭಿಸಿದ್ದು ಜಿ.ಎಲ್ ಆಚಾರ್ಯ ಜ್ಯುವೆಲ್ಲರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.