Recent Posts

Monday, January 20, 2025
ಸುದ್ದಿ

ಮಲ್ಪೆಯಲ್ಲಿ ಕರಾವಳಿ ಕಾವಲು ಪೊಲೀಸರಿಂದ ಶಿಕ್ಷಕ ದಿನಾಚರಣೆ- ಕಹಳೆ ನ್ಯೂಸ್

ಉಡುಪಿ : ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಲ್ಪೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕ ಟಿ.ಎಸ್.ಸುಲ್ಪಿ ಹಾಗೂ ಸಿಎಸ್‌ಪಿಯ 9 ಠಾಣೆಗಳ ಪಿಐಗಳ ಸಹಕಾರದೊಂದಿಗೆ ಕರಾವಳಿ ವ್ಯಾಪ್ತಿಯ ಉತ್ತಮ ಶಿಕ್ಷಕರಾದ ಸುಮಂಗಳ ಮಲ್ಪೆ, ಹೇಮಲತಾ ಮಲ್ಪೆ, ಮನೋಹರ್ ಉಪ್ಪುಂದ, ಗಣೇಶ್ ಕಾರ್ನಿಕ್ ಗಂಗೊಳ್ಳಿ, ಪವನ್ ಕುಮಾರ್ ಉಡುಪಿ, ಗಿರೀಶ್ ನಾಯಕ್ ಭಟ್ಕಳ, ಮತ್ಮಿಮ್ಮಣಿ ಮುರ್ಡೆಶ್ವರ ಅವರನ್ನು ಗುರುತಿಸಿ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವಿಶೇಷವಾಗಿ ಅನೇಕ ಯುವಕರಿಗೆ ಬೋಟ್ ಚಾಲನೆ ಯನ್ನು ಕಲಿಸಿದ ಹಿರಿಯ ಮೀನು ಗಾರ ಬೋಟ್ ಚಾಲನಾ ತರಬೇತುದಾರ ರಾದ ರಾಮ ಮೆಂಡನ್, ಖಾಸಿಮ್ ಬಾವ, ಮೋಹನ್ ಕುಂದರ್, ನಾಗರಾಜ ಸುವರ್ಣ, ರಾಮ ಸುವರ್ಣ ಅವರನ್ನು ಗುರುವಿನ ಸ್ಥಾನಮಾನ ನೀಡಿ ಸನ್ಮಾನಿಸಲಾಯಿತು.