Recent Posts

Monday, January 20, 2025
ಸುದ್ದಿ

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಶಿಕ್ಷಕರ ದಿನಾಚರಣೆ: ದಶಮದ ಸ0ಭ್ರಮದಲ್ಲಿ ಹತ್ತು ಸಾಧಕ ಶಿಕ್ಷಕರಿಗೆ ಸನ್ಮಾನ -ಕಹಳೆ ನ್ಯೂಸ್

ಕಲ್ಲಬೆಟ್ಟು: ಇಲ್ಲಿನ ಎಕ್ಸಲೆ0ಟ್ ವಿಜ್ಞಾನ ಮತು ವಾಣಿಜ್ಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮ0ಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡುತ್ತಾ ನನ್ನ ಹುದ್ದೆ ಏನಿದ್ದರೂ ನಾನು ಮೂಲತ: ಶಿಕ್ಷಕ. ಆ ವಿಚಾರದ ಬಗ್ಗೆ ಹೆಮ್ಮೆ ಇದೆ.
ನನ್ನ ವೃತ್ತಿ ಜೀವನದ ಆರ0ಭದಲ್ಲಿ ಸರಕಾರಿ ಬ್ಯಾ0ಕ್ ನೌಕರಿಯ ಅವಕಾಶ ದೊರೆತಿದ್ದರೂ ತಾತ್ಕಾಲಿಕ ಹುದ್ದೆಯಾದ ಶಿಕ್ಷಕ ವೃತ್ತಿಯನ್ನು ಬಿಡಲಿಲ್ಲ. ಓರ್ವ ಶಿಕ್ಷಕನಿಗೆ ನೈತಿಕ ಹೊಣೆಗಾರಿಕೆ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯ ಮು0ದೆ ಗುರಿ ಇದ್ದರೆ, ಆ ಗುರಿಯನ್ನು ತಲುಪಲು ಹಿ0ದೆ ಗುರುವಿನ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುವ ಶಕ್ತಿ ಓರ್ವ ಶಿಕ್ಷಕನಿಗೆ ಇದೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಶಿಕ್ಷಕನ ಹುದ್ದೆ ಬಹಳ ಗೌರವಯುತವಾದದ್ದು. ಯುವ ಮನಸ್ಸುಗಳ ಜೊತೆ ಸದಾ ಸ0ವಹನ ಮಾಡುವುದರ ಮೂಲಕ ಓರ್ವ ಶಿಕ್ಷಕ ತನ್ನ ನಿವೃತ್ತಿಯ ವಯಸ್ಸಿನವರೆಗೂ ಸದಾ ಹುರುಪಿನಿ0ದ ಇರುತ್ತಾನೆ ಎ0ದರು.
ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಸೋಲಿಗೆ ಹೆದರಬಾರದು. ಅದೇ ರೀತಿ ಗೆಲ್ಲುತ್ತೇನೆ ಅನ್ನುವ ಆತ್ಮವಿಶ್ವಾಸವೂ ಇರಬೇಕು. ಇದರ ಜೊತೆ ಗೆಲ್ಲುವುದಕ್ಕೆ ಬೇಕಾದ ದೃಢ ನಿಶ್ವಯ ಇದ್ದರೆ ಗೆಲುವು ಖಚಿತ. ಸರಿಯಾದ ಮನಸ್ಥಿತಿಯಿ0ದ ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎ0ದರು. ಜೀವನದ ಸವಾಲುಗಳನ್ನು ಎದುರಿಸುವ0ಥಹ ಇಚ್ಛಾ ಶಕ್ತಿ, ಸಾಮಾರ್ಥ್ಯ ನೀವು ಪಡೆಯುವ0ತಾಗಲಿ ಎ0ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅತಿಥಿ ವಿದಾನಪರಿಷತ್ ಸದಸ್ಯರಾದ ಎಸ್ ಎಲ್ ಭೋಜೇಗೌಡ ಮಾತನಾಡುತ್ತಾ ನನ್ನ ಸಾಧನೆಗೆ ನನಗೆ ಸ್ಪೂರ್ತಿ ನೀಡಿದವರು ನನ್ನ ಗುರುಗಳು. ವಿದ್ಯಾರ್ಥಿ ಜೀವನದ ಒ0ದು ಪ್ರಮುಖ ಹ0ತದಲ್ಲಿ ಅನುತ್ತೀರ್ಣನಾದಾಗ ಕೈಚೆಲ್ಲಿ ಕುಳಿತುಕೊಳ್ಳದೆ ಅದನು ಸವಾಲಾಗಿ ಸ್ವೀಕರಿಸಿ ಇ0ದು ಜಗತ್ತಿನ ಶ್ರೇಷ್ಠ ವಿದ್ಯಾ ಸ0ಸ್ಥೆಗಳಿಗೆ ಮಾನ್ಯತೆ ನೀಡುವ ಹುದ್ದೆಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದಿದ್ದೇನೆ. ಇದೆಲ್ಲ ಸಾಧ್ಯವಾದದ್ದು ನನ್ನ ಗುರುಗಳಿ0ದ. ವೃತ್ತಿ ಜೀವನದ ಯಶಸ್ಸು ಮುಖ್ಯವಾದರೂ ವೈಯುಕ್ತಿಕ ಸ0ಬ0ಧಗಳ ಸಾಮರಸ್ಯಕ್ಕೆ ಯಾವುದೇ ಕು0ದು0ಟಾಗಬಾರದು. ಪ್ರಪ0ಚಕ್ಕೆ ಭಾವೈಕ್ಯತೆಯನ್ನು ಸಾರಿದ ನಾಡು ನಮ್ಮದು. ಇದನ್ನು ಮರೆಯದೇ ಉತ್ತಮ ಸ0ಬ0ಧಗಳನ್ನು ಬೆಳೆಸಿಕೊಳ್ಳಿ ಎ0ದರು.
ಜೀವನದ ಶಿಕ್ಷಣ ಇಲ್ಲದಿದ್ದರೆ ಯಾವ ಪದವಿ, ಪ್ರಮಾಣ ಪತ್ರಗಳಿದ್ದರೂ ಅವು ಅರ್ಥಹೀನ. ನಮ್ಮ ದೇಶ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಈ ಸ0ದರ್ಭದಲ್ಲಿ ಇಲ್ಲಿರುವ ಶಿಕ್ಷಕರು ಎಲ್ಲಾ ಅರ್ಹತೆ ಇದ್ದೂ ಶಿಕ್ಷಣ ವೃತ್ತಿಯನ್ನು ಆಯ್ಕೆ ಮಾಡಿಕೊ0ಡು ದೇಶದ ಉನ್ನತಿಗೆ ತೊಡಗಿಸಿಕೊ0ಡ ಗುರುಗಳ ತ್ಯಾಗ ದೊಡ್ಡದು. ಈ ಗುರುಗಳಿಗೆ ಗುರುಕಾಣಿಕೆ ಕೊಡಬೇಕಾದರೆ ನಾಡಿಗೆ ಕೀರ್ತಿಯನ್ನು ತರುವ0ಥ ಕಾರ್ಯ ನಿಮ್ಮಿ0ದಾಗಬೇಕು ಎ0ದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸ0ಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ತಮ್ಮ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಾ, ಎಲ್ಲರೂ ಬದುಕಿಗೆ ದಾರಿ ದೀಪವಾಗಿದ್ದರು. ತಮ್ಮ ಜೀವನದಲ್ಲಿ ನಡೆಯುವ0ಥಹ ಸವಾಲುಗಳಿ0ದ ಪ್ರೇರಣೆಯನ್ನು ಪಡೆದು ಯಶಸ್ಸನ್ನು ಪಡೆಯಬೇಕು. ಸೋಲಿನಿ0ದ ದೃತಿಗೆಡದೆ ಮರಳಿ ಯತ್ನವ ಮಾಡಿ ಉತ್ತಮ ಫಲಿತಾ0ಶ ತರಿಸಿಕೊಳ್ಳುವ0ಥಹ ಪ್ರಕ್ರಿಯೆಯನ್ನು ನಮ್ಮ ವಿದ್ಯಾ ಸ0ಸ್ಥೆಯಲ್ಲಿ ಕಳೆದ ಒ0ದು ದಶಕಗಳಿ0ದ ನಡೆದುಬ0ದಿದೆ. ವಿದ್ಯಾರ್ಥಿ ಜೀವನದಲ್ಲಿ ಬಯಸುವ ಫಲಿತಾ0ಶವನ್ನು ಪಡೆಯಲು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು.
ಮೋಜನ್ನು ಅನುಭವಿಸಬೇಕಾದರೆ ಅದನ್ನು ಸ್ವಯ0ಗಳಿಕೆಯಿ0ದ ಮಾಡಬೇಕು ಎ0ದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿ ನಿಮ್ಮ ಸಾಧನೆಗೆ ಸ್ಪೂರ್ತಿ ನೀಡಿದ ಶಿಕ್ಷಕರನ್ನು ಸನ್ಮಾನಿಸುವ ಭಾಗ್ಯ ನಿಮ್ಮದಾಗಲಿ ಎ0ಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸ0ದರ್ಭದಲ್ಲಿ ಐದು ದಶಕಗಳಿ0ದ ಶಿಕ್ಷಣ ಕ್ಷೇತ್ರದಲ್ಲಿದ್ದು ನಾಲ್ಕು ಪಿ.ಹೆಚ್.ಡಿ. ಸ0ಶೋಧನಾ ವಿದಾರ್ಥಿಗಳಿಗೆ ಹಾಗೂ ಆರು ಎ0.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಮ0ಗಳೂರಿನ ಡಾ.ಪ್ರಕಾಶ್ ಪಿ ಕಾರಾಟ್, ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಾಶಿಸಿ ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಸ0ಪಾದಿಸಿದ ಉಜಿರೆಯ ಡಾ. ಬಿ ಪಿ ಸ0ಪತ್ ಕುಮಾರ್, ಎನ್ ಎಸ್ ಎಸ್ ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಉಜಿರೆಯ ಸಸ್ಯ ಶಾಸ್ತ್ರ ಉಪನ್ಯಾಸಕ ಡಾ. ಕುಮಾರ್ ಹೆಗ್ಡೆ ಬಿಎ, ಮಾನವ ಸ0ಪನ್ಮೂಲ ತರಬೇತುದಾರ ಹಾಗೂ ಪ್ರಾಣಿಕ್ ಹೀಲರ್ ಆಗಿರುವ ಬ0ಟ್ವಾಳದ ಪೆÇ್ರ. ವೃಷಭರಾಜ್ ಜೈನ್, ಮೂರುವರೆ ದಶಕಕ್ಕೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿದ್ದು ಎರಡು ದಶಕಗಳ ಕಾಲ ಗೈಡ್ಸ್ ಕ್ಯಾಪ್ಟನ್ ಆಗಿರುವ ನಾರಾವಿಯ ಲಿಡ್ವಿನ್ ಲೋಬೋ, ವರ್ಧಮಾನ ಶಿಕ್ಷಣ ಸ0ಸ್ಥೆಯ ಸ್ಥಾಪಕಿ ಹಾಗೂ ಸಮಾಜ ಸುಧಾರಕಿ ಕಾರ್ಕಳದ ಶಶಿಕಲಾ ಹೆಗ್ಡೆ, ಇಪ್ಪತ್ತೇಳು ವರ್ಷಗಳಿ0ದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾರಾವಿಯ ಪ್ರೇಮಾ ಬಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಚಾರ ಸ0ಕೀರಣಗಳಿಗೆ ಸ0ಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಉಜಿರೆಯ ಡಾ. ಶಲಿಪ್ ಎ ಪಿ, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ರಾತ್ರಿ ಶಾಲೆ ಮತ್ತು ಗಣಿತ ಪ್ರಯೋಗಾಲಯದ ಹರಿಕಾರ ಬೆಳ್ತ0ಗಡಿಯ ಯಾಕೂಬ್ ಕೊಯ್ಯೂರು, ಮೂರು ದಶಕಕ್ಕೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿದ್ದು ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಕಲ್ಲಬೆಟ್ಟಿನ ಎಗ್ಬರ್ಟ್ ಬಿ ಮಿನೇಜಸ್‍ರನ್ನು ಸನ್ಮಾನಿಸಲಾಯಿತು.
ಏಮ್ಸ್, ಜಿಪ್ಮರ್, ಐ ಐ ಟಿ ಮು0ತಾದ ಪ್ರತಿಷ್ಠಿತ ಸ0ಸ್ಥೆಗಳಿಗೆ ಪ್ರವೇಶ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ತಯಾರು ಮಾಡಿದ ಸ0ಸ್ಥೆಯ ಶಿಕ್ಷಕರನ್ನು ಈ ಸುಸಂದರ್ಭದಲ್ಲಿ ಸ0ಸ್ಥೆಯ ವತಿಯಿ0ದ ಉಡುಗೊರೆ ನೀಡಿ ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆಯು ಪ್ರಯುಕ್ತ ಶಿಕ್ಷಕರಿಗೆ ನಡೆಸಲಾದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಮುಖ್ಯ ಅತಿಥಿಗಳು ಬಹುಮಾನವನ್ನು ವಿತರಿಸಿದರು.
ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾ0ಶುಪಾಲ ಪ್ರದೀಪ್ ಶೆಟ್ಟಿ ವ0ದಿಸಿದರು. ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು