Recent Posts

Sunday, January 19, 2025
ಸುದ್ದಿ

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ “ಕಾಂಪೊಸೈಟ್ ಫೈಬರ್” ಲೈಟ್ ವೆಯ್ಟ್ ಹೆಲ್ಮೆಟ್…!! – ಕಹಳೆ ನ್ಯೂಸ್

ಬೈಕ್ ರೈಡಿಂಗ್ ಟೈಮಲ್ಲಿ ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯ ಎಂಬುದು ನಮಗೆಲ್ಲಾ ತಿಳಿದೇ ಇದೆ. ನಮ್ಮಲ್ಲಿ ಪ್ರತಿನಿತ್ಯ ಸಂಭವಿಸುವ ಬೈಕ್ ಅವಘಡಗಳಲ್ಲಿ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ಅಥವಾ ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸದಿರುವ ಕಾರಣದಿಂದ ಅದೆಷ್ಟೋ ಜನರು ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿರುತ್ತಾರೆ ಅಥವಾ ತಲೆ ಮತ್ತು ಮುಖಭಾಗದ ಮಾರಣಾಂತಿಕ ಗಾಯಗಳಿಗೆ ಒಳಗಾಗುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿಚಕ್ರ ವಾಹನ ಸವಾರಿಯಲ್ಲಿ ಸರಕಾರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ಇಂದಿಗೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವ ವಿಷಯದಲ್ಲಿ ಅದೆಷ್ಟೋ ಜನರಿಗೆ ಅಸಡ್ಡೆಯಿದೆ. ಆದರೆ ಇನ್ನು ಕೆಲವರು ಹೆಲ್ಮೆಟ್ ಧರಿಸದೇ ಬೈಕ್ ರೈಡಿಂಗ್ ಮಾಡದವರೂ ಇದ್ದಾರೆ. ಇನ್ನು ಕೆಲವರಿಗೆ ಫ್ಯಾಶನ್ ಹೆಲ್ಮೆಟ್ ಗಳಲ್ಲಿ ಆಸಕ್ತಿ. ಒಟ್ಟಿನಲ್ಲಿ ನಮ್ಮ ಜೀವ ರಕ್ಷಣೆಗೆ ಬಳಸುವ ಹೆಲ್ಮೆಟ್ ನಲ್ಲಿ ನಾನಾ ವಿಧಗಳಿವೆ, ಸ್ವರೂಪಗಳಿವೆ, ಅಪರೂಪಗಳೂ ಇವೆ!
ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್ ಗಳನ್ನೇ ಧರಿಸಬೇಕೆಂಬ ನಿಯಮವಿದೆ. ಬೈಕ್ ರೈಡಿಂಗ್ ಅನ್ನು ಒಂದು ಕ್ರೇಝ್ ಮಾಡಿಕೊಂಡಿರುವ ನಮ್ಮ ಯೂತ್ಸ್ ಅಂತೂ ವಿಭಿನ ರೀತಿಯ ಹೆಲ್ಮೆಟ್ ಗಳನ್ನು ಧರಿಸುವ ಕ್ರೇಝ್ ಇಟ್ಟುಕೊಂಡಿರುತ್ತಾರೆ ಮತ್ತು ಒಂದು ಹೆಲ್ಮೆಟ್ ಗೋಸ್ಕರವೇ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೂ ಅವರು ಸಿದ್ಧರಾಗಿರುತ್ತಾರೆ.
ಈ ವಿಷ್ಯ ಈಗ್ಯಾಕೆ ಬಂತಂದ್ರೆ, ಇದೀಗ ಒಂದು ವಿಶಿಷ್ಟ ರೀತಿಯ ಹೆಲ್ಮೆಟ್ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ. ಈ ಹೆಲ್ಮೆಟ್ ನ ವಿಶೇಷತೆ ಏನು? ಇದಕ್ಕೆ ರೇಟ್ ಎಷ್ಟಿದೆ? ಏನೆಲ್ಲಾ ಫೀಚರ್ಸ್ ಇದರಲ್ಲಿದೆ ಎಂಬೆಲ್ಲಾ ವಿವರಗಳನ್ನು ನಾವೀಗ ನೋಡಿಕೊಂಡು ಬರೋಣ ಬನ್ನಿ…
ಮುಂಬಯಿ ಮೂಲದ ಸ್ಟಾರ್ಟ್ ಅಪ್ ಕಂಪೆನಿಯಾಗಿರುವ ‘ತಿವ್ರ’ ಇದೀಗ ಕಾಂಪೊಸೈಟ್ ಫೈಬರ್ ಹೆಲ್ಮೆಟ್ ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೆಲ್ಮೆಟ್ ಗಳು ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿ ಸಂಪೂರ್ಣವಾಗಿ ದೇಶದಲ್ಲೇ ತಯಾರಿಸಲಾಗಿದ್ದು ಒಂದು ಹೆಲ್ಮೆಟ್ ನ ಬೆಲೆ ಕೇಳಿದ್ರೆ ಮಾತ್ರ ನೀವು ಶಾಕ್ ಆಗ್ತೀರಾ..!

ಈ ಹೆಲ್ಮೆಟ್ ನ ರೇಟೆಸ್ಟು ಗೊತ್ತಾ?
ತಲೆಗೆ ಹೆಚ್ಚಿನ ಭಾರ ನೀಡದೆ ಸುರಕ್ಷತೆಯ ಮಟ್ಟ ಅಧಿಕವಿರುವ ಈ ಕಾಂಪೊಸೈಟ್ ಫೈಬರ್ ಹೆಲ್ಮೆಟ್ ಗಳು ಕೇವಲ 1250 ಗ್ರಾಂಗಳಷ್ಟು ತೂಕವನ್ನು ಮಾತ್ರವೇ ಹೊಂದಿದೆ. ಅಂದರೆ, ನೀವು ರೈಡಿಂಗ್ ನಲ್ಲಿ ಈ ಹೆಲ್ಮೆಟ್ ಧರಿಸಿದ್ರೆ ಕೇವಲ ಒಂದೂ ಕಾಲು ಕೆ.ಜಿಯಷ್ಟು ಭಾರ ನಿಮ್ಮ ಮಂಡೆ ಮೇಲೆ ಇರುತ್ತದೆ!
ಈ ವಿಶಿಷ್ಟ ಹೆಲ್ಮೆಟ್ ಬಿ.ಐ,ಎಸ್., ಡಾಟ್ ಮತ್ತು ಇಸಿಇ 22.05 ಸುರಕ್ಷತಾ ಮಟ್ಟಗಳನ್ನು ಯಶಸ್ವಿಯಾಗಿ ಪೂರೈಸಿ ಬೈಕ್ ರೈಡರ್ಸ್ ಮಂಡೆಯನ್ನು ಅಲಂಕರಿಸಲು ಸಜ್ಜಾಗಿದೆ..! ಅಂದ ಹಾಗೆ ಪ್ರೀಮಿಯಂ ಹೆಲ್ಮೆಟ್ ಸೆಗ್ಮೆಂಟ್ ನಲ್ಲಿ ಬರುವ ಈ ಹೆಲ್ಮೆಟ್ ನ ಬೆಲೆ ಕೇವಲ 15 ಸಾವಿರ ರೂಪಾಯಿಗಳು ಮಾತ್ರ!
ಜಗತ್ತಿನಲ್ಲೇ ಹಗುರ ತೂಕದ ಹೆಲ್ಮೆಟ್ ಅಂತೆ ಇದು!
ಈ ಹೆಲ್ಮೆಟ್ ತಯಾರಿಸಿರುವ ‘ತಿವ್ರ’ ಕಂಪೆನಿ ಹೇಳಿಕೊಂಡಿರುವ ಪ್ರಕಾರ 1250 ಗ್ರಾಂಗಳಷ್ಟು ತೂಕಗಳನ್ನು ಹೊಂದಿರುವ ಈ ಹೆಲ್ಮೆಟ್ ವಿಶ್ವದಲ್ಲೇ ‘ಲೈಟ್ ವೈಯ್ಟ್’ ಹೆಲ್ಮೆಟ್ ಅಂತೆ! ಚಿನ್ನದ ಬಣ್ಣದ ಕಣ್ಣು ಕುಕ್ಕುವ ವರ್ಣದಲ್ಲಿರುವ ಈ ಹೆಲ್ಮೆಟ್ ಆರು ವಿಧದ ಗ್ರಾಫಿಕ್ಸ್ ವಿನ್ಯಾಸದಲ್ಲಿ ಹೆಲ್ಮೆಟ್ ಪ್ರಿಯರಿಗೆ ಸಿಗಲಿದೆ. ಎಕ್ಸ್ ರೋಡ್ಸ್, ಸಬ್ರೆ, ರಾಝ್ ಟಾಝ್, ಟಿ1, ಬಝಿ ಮತ್ತು ಡೆಮನ್ ವಿನ್ಯಾಸಗಳಲ್ಲಿರಲಿದ್ದು ಸ್ಮಾಲ್, ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟ್ರಾ ಲಾರ್ಜ್ ಗಾತ್ರಗಳಲ್ಲಿ ಇದು ಹೆಲ್ಮೆಟ್ ಪ್ರಿಯರಿಗೆ ಲಭ್ಯವಾಗಲಿದೆ.
ಹೆಲ್ಮೆಟ್ ಶೋರೂಂಗಳಲ್ಲೂ ಈ ಹೆಲ್ಮೆಟ್ ಸಿಗಲ್ಲ!
ವಿಶ್ವದ ಲೈಟ್ ವೆಯ್ಟ್ ಹೆಲ್ಮೆಟ್ ಎಂದು ಗುರುತಿಸಿಕೊಂಡಿರುವ ಈ ಹೆಲ್ಮೆಟ್ ಸದ್ಯಕ್ಕೆ ಯಾವುದೇ ಹೆಲ್ಮೆಟ್ ಶೋರೂಂಗಳಲ್ಲಿ ನಿಮಗೆ ಸಿಗದು. ತನ್ನ ಈ ವಿಶಿಷ್ಟ ಪ್ರೊಡಕ್ಟನ್ನು ಈ ಸ್ಟಾರ್ಟ್ ಅಪ್ ಕಂಪೆನಿ ಆನ್ ಲೈನ್ ಮತ್ತು ಕಂಪೆನಿ ವೆಬ್ ಸೈಟ್ ನಲ್ಲಿ ಮಾತ್ರವೇ ಗ್ರಾಹಕರಿಗೆ ಒದಗಿಸಲಿದೆ. ಸದ್ಯಕ್ಕೆ ಭಾರತದ ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್ ಗಳನ್ನು ಮಾರಾಟ ಮಾಡುವ ಪ್ಲ್ಯಾನ್ ಹೊಂದಿರುವ ಈ ಕಂಪೆನಿ ಮುಂಬರುವ ದಿನಗಳಲ್ಲಿ ಅಮೆರಿಕಾ ಮಾರುಕಟ್ಟೆಯಲ್ಲೂ ತನ್ನ ಪ್ರಾಡಕ್ಟನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿದೆ.

ಪ್ರಥಮ ವರ್ಷದಲ್ಲಿ 38 ಸಾವಿರದಿಂದ 40 ಸಾವಿರದಷ್ಟು ಹೆಲ್ಮೆಟ್ ಗಳನ್ನು ಮಾರಾಟ ಮಾಡುವ ಗುರಿಯನ್ನೂ ಸಹ ಕಂಪೆನಿ ಹೊಂದಿದೆ. ನಿಮಗೂ ಈ ಸ್ಪೆಷಲ್ ಕಾಂಪೊಸೈಟ್ ಫೈಬರ್ ಹೆಲ್ಮೆಟ್ ಬೇಕೆಂದ್ರೆ 15 ಸಾವಿರ ರೆಡಿಮಾಡಿಟ್ಕೊಳ್ಳಿ ಮತ್ತು ಮಾರುಕಟ್ಟೆಗೆ ಬಂದ ಕೂಡ್ಲೇ ಖರೀದಿಸಿ – ಎಂಜಾಯ್ ಸೇಫ್ ಆ್ಯಂಡ್ ಹ್ಯಾಪಿ ರೈಡಿಂಗ್..!