Recent Posts

Sunday, January 19, 2025
ಸುದ್ದಿ

ಮಂಗಳೂರು : ಲಿವಾ ಮಿಸ್ ಯುನಿವರ್ಸ್ ದಿವಿತಾ ರೈಗೆ ಹುಟ್ಟೂರಲ್ಲಿ ಅಭಿನಂದನಾ ಕಾರ್ಯಕ್ರಮ..!! – ಕಹಳೆ ನ್ಯೂಸ್

ಮಂಗಳೂರು : ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲಿವಾ ಮಿಸ್ ಯೂನಿವರ್ಸ್ ನಲ್ಲಿ ಗೆದ್ದು ಮುಂದೆ ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಚೆಲುವೆ ದಿವಿತಾ ರೈ ಅವರು ಇಂದು ಮಂಗಳೂರಿಗೆ ಆಗಮಿಸಿದರು.

ನಗರದ ಅಂಬೇಡ್ಕರ್‌ (ಜ್ಯೋತಿ) ವೃತ್ತದಿಂದ ತೆರೆದ ವಾಹನದಲ್ಲಿ 23 ವರ್ಷದ ದಿವಿತಾ ರೈ ಅವರನ್ನು ಮೆರವಣಿಗೆಯಲ್ಲಿ ಬಂಟ್ಸ್‌ಹಾಸ್ಟೆಲ್‌ನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣಕ್ಕೆ ಕರೆತರಲಾಯಿತು. ಕೇರಳದ ಚೆಂಡೆಗಳು, ವಾದ್ಯಸಂಗೀತ, ಹುಲಿವೇಷ ಕುಣಿತ ಮೆರವಣಿಗೆಗೆ ಮೆರುಗು ನೀಡಿದವು.

ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ದಿವಿತಾ ರೈ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡರು. ಮೆರವಣಿಗೆ ಯುದ್ದಕ್ಕೂ ದಿವಿತಾ ರೈ ಅವರು ಜನರತ್ತ ಕೈಬೀಸಿ, ನಮಸ್ಕರಿಸುತ್ತಾ ಮುಗುಳ್ನಗೆ ಬೀರಿದರು.