Recent Posts

Sunday, January 19, 2025
ಸುದ್ದಿ

ಉಮೇಶ ಕತ್ತಿ‌ ನಿಧನಕ್ಕೆ ಪೇಜಾವರ ಶ್ರೀ ಸಂತಾಪ – ಕಹಳೆ ನ್ಯೂಸ್

ನಾಡಿನ‌ ಹಿರಿಯ ನೇತಾರ ಆಹಾರ ಮತ್ತು ನಾಗರಿಕ ಪೊರೈಕೆ , ಹಾಗೂ ಅರಣ್ಯ ಮಂತ್ರಿ ಉಮೇಶ ವಿ ಕತ್ತಿಯವರ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

9 ಬಾರಿ ಹುಕ್ಕೇರಿಯಿಂದ ಸ್ಪರ್ಧಿಸಿ 8 ಬಾರಿ ಅವರು ಗೆದ್ದಿರುವುದು ಅವರ ಮೇಲೆ ಜನರಿಟ್ಟ ಪ್ರೀತಿಗೆ ಸಾಕ್ಷಿ .

ಸಚಿವ ಕತ್ತಿ ಇತ್ತೀಚೆಗೆ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಕೃಷ್ಣಾಪುರ ಶ್ರೀಗಳಿಂದ ಸರ್ವಜ್ಞ ಪೀಠಲ್ಲಿ ಆಶೀರ್ವಾದ ಪಡೆದ ಸಂದರ್ಭ

ಇತ್ತೀಚೆಗಷ್ಟೇ ಉಡುಪಿಯಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮಾರಕ ಸ್ಮೃತಿ ವನಕ್ಕೆ ಶಿಲಾನ್ಯಾಸ ನೆರವೇರಿಸಿ ಶುಭ ಕೋರಿ ಅತೀ ಶೀಘ್ರದಲ್ಲಿ ಈ ಕಾರ್ಯ ಮುಗಿದು ಉದ್ಘಾಟನೆಗೂ ಆಗಮಿಸೋದಾಗಿ ತಿಳಿಸಿದ್ರು . ಆದರೆ ಈಗ ಅವರೇ ಹಠಾತ್ ಅಗಲಿರುವ ವಿಷಯ ತಿಳಿದು ತೀವ್ರ ವಿಷಾದವಾಗಿದೆ . ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಿಕರಿಗೆ ಈ ವಿಯೋಗದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಕೃಷ್ಣ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .