ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಬಿಜೆಪಿಯ ಹಿರಿಯ ಕಾರ್ಪೋರೇಟ್ ಆಗಿ ಜಯಾನಂದ ಅಂಚನ್ : ಉಪಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಪೂರ್ಣಿಮಾ ಆಯ್ಕೆ – ಕಹಳೆ ನ್ಯೂಸ್
ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಬಿಜೆಪಿಯ ಹಿರಿಯ ಕಾರ್ಪೋರೇಟ್ ಆಗಿ ಜಯಾನಂದ ಅಂಚನ್ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಪೂರ್ಣಿಮಾ ಅವರು ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46ಮಂದಿ ಜಯಾನಂದ ಅಂಚನ್ ಪರ ಮತ ಚಲಾಯಿಸಿದರು.
ಕಾಂಗ್ರೆಸ್‌ನ ಹಿರಿಯ ಪ್ರತಿಸ್ಪರ್ಧೆ ದೇರೆಬೈಲ್ ವಾರ್ಡ್ ನ ಕಾರ್ಪೊರೇಟರ್ ಶಶಿಧರ್ ಹೆಗ್ಡೆ 14 ಮತಗಳನ್ನಷ್ಟೇ ಪಡೆದ್ರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ನ ಸದಸ್ಯೆ ಪೂರ್ಣಿಮಾ 46ಮತ ಗಳಿಸಿ ಚುನಾಯಿತರಾದರು. ಕಾಂಗ್ರೆಸ್ ನಿಂದ ಕಣಕ್ಕಿಳಿದ ಬಂದರ್ ವಾರ್ಡ್ ನ ಸದಸ್ಯೆ ಝೀನತ್ ಶಂಶುದ್ದೀನ್ 14 ಮತಗಳನ್ನು ಗಳಿಸಿದ್ದರು. ಸದಸ್ಯರು ಕೈ ಎತ್ತುವ ಮೂಲಕ ಪರ ವಿರೋಧ ಮತಗಳನ್ನು ಚಲಾಯಿಸಿದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಿ ಸಿ ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.