ಶ್ರೀನಗರ: ರಂಗ ಕಲಾವಿದರರ್ವರು ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪಿದ ಘಟನೆ ನಿನ್ನೆ ಉತ್ತರಪ್ರದೇಶದ ಶ್ರೀನಗರದಲ್ಲಿ ನಡೆದಿದೆ.
ಯೋಗೇಶ್ ಗುಪ್ತಾ (೨೦) ಎಂಬ ರಂಗ ಕಲಾವಿದ ಮೃತ ಯುವಕ. ಜಮ್ಮುವಿನ ಬಿಷ್ನಾಹ್ ಪ್ರದೇಶದ ಕೋಥೇ ಗ್ರಾಮದಲ್ಲಿ ಗಣೇಶ ಉತ್ಸವ ಕರ್ಯಕ್ರಮದಲ್ಲಿ ಕಲಾವಿದ ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಪ್ರದರ್ಶನ ಮಾಡುವಾಗ, ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಅವರು ಆ ನಾಟಕದಲ್ಲಿ ತಮ್ಮ ಪಾತ್ರ ಮಾಡುತ್ತಾ ಕೆಳಗೆ ಬಿದ್ದಿರಬಹುದು ಎಂದು ಪ್ರೇಕ್ಷಕರು ಭಾವಿಸಿದ್ದರು. ಆದರೆ, ಕೆಳಗೆ ಬಿದ್ದ ಕಲಾವಿದ ಎಷ್ಟು ಹೊತ್ತಾದರೂ ಏಳದಿದ್ದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿರುವುದು ಗೊತ್ತಾಗಿದೆ.