Recent Posts

Monday, January 20, 2025
ಸುದ್ದಿ

“ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನದಿಂದ ತೀವ್ರ ನೋವಾಗಿದೆ” ಪ್ರಧಾನಿ ನರೇಂದ್ರ ಮೋದಿ ಟ್ವೀಟ್ – ಕಹಳೆ ನ್ಯೂಸ್

ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದು. ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನದಿಂದ ತೀವ್ರ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲುಳಿಯಲಿದ್ದಾರೆ. ಅವರು ತಮ್ಮ ದೇಶದ ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯಿಂದ ಇದ್ದವರು. ಅವರ ಕುಟುಂಬದ ಮತ್ತು ಬ್ರಿಟನ್ ಜನರ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಅವರ ಜತೆ ನಾವಿದ್ದೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
‘2015 ಮತ್ತು 2018ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗ ರಾಣಿ 2ನೇ ಎಲಿಜಬೆತ್ ಜತೆ ಮಾತುಕತೆ ನಡೆಸಿರುವುದು ಸ್ಮರಣೀಯವಾಗಿದೆ. ಅವರ ಸ್ವಾಗತ ಮತ್ತು ದಯಾಪರತೆಯನ್ನು ಎಂದಿಗೂ ಮರೆಯಲಾರೆ. ಮಹಾತ್ಮ ಗಾಂಧಿಯವರು ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ಸಭೆಯೊಂದರ ವೇಳೆ ಅವರು ನನಗೆ ತೋರಿಸಿದ್ದರು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ರಾಣಿಯ ಗೌರವಾರ್ಥ ಬ್ರಿಟನ್‌ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ದೀರ್ಘಾವಧಿಯ ಬದುಕು ಮತ್ತು ಆಡಳಿತ ಕುರಿತು ಸಂತಾಪದ ಮಾತುಗಳು ಬರುತ್ತಿವೆ.
ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆಯು ತಿಳಿಸಿದೆ.
ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್ನ ರಾಜಕುಮಾರ, 73 ವರ್ಷದ ಚಾರ್ಲ್ಸ್ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಹೇಳಿದರು.
ಗುರುವಾರ ಸಂಜೆ ರಾಣಿಯ ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರು. ರಾಣಿಯ ಮಕ್ಕಳಾದ ಚಾರ್ಲ್ಸ್, ರಾಜಕುಮಾರಿ 72 ವರ್ಷದ ಆಯನೆ, ರಾಜಕುಮಾರರಾದ 62 ವರ್ಷದ ಆಂಡ್ರ‍್ಯೂ ಮತ್ತು 58 ವರ್ಷದ ಎಡ್ವರ್ಡ್ ಅವರು ಬಾಲ್‌ಮೊರಲ್‌ನಲ್ಲಿರುವ ರಾಣಿಯ ಎಸ್ಟೇಟ್‌ಗೆ ಧಾವಿಸಿದರು. ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್ ಟ್ರಸ್ ಅವರನ್ನು ನೇಮಕ ಮಾಡಿದ್ದರು