Wednesday, January 22, 2025
ಸುದ್ದಿ

ಮಂಗಳೂರು: 6.98 ಕೋಟಿ ರೂ.ಗಳ ಕಾಮಗಾರಿಗೆ ಶಾಸಕ ವೇದವ್ಯಾಸ್ ರಿಂದ ಶಿಲಾನ್ಯಾಸ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಅಭಿವೃಧ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಾಂತರ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿವೆ ಎಂದು ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 56ನೇ ಮಂಗಳದೇವಿ ವಾರ್ಡಿನಲ್ಲಿ ಮಂಗಳಾ ದೇವಿ ಬಸ್ ಟರ್ಮಿನಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ನಗರ ಪಾಲಿಕೆ ಸಿಬ್ಬಂದಿಗಳಿಗೆ ನೂತನ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಅಂತರಾಷ್ಟ್ರೀಯ ನಗರವಾಗಿರುವ ಮಂಗಳೂರಿನ ಅಭಿವೃದ್ದಿಗೆ ಸರ್ಕಾರಗಳು ಬದ್ದವಾಗಿವೆ, ಈ ದಿಸೆಯಲ್ಲಿ ನಗರಕ್ಕೆ ಅಗತ್ಯವಿರುವ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡು ಅನುಷ್ಠಾನ ಮಾಡಲಾಗುತ್ತಿದೆ, ಮಂಗಳ ದೇವಿ ದೇವಸ್ಥಾನದ ಮುಖ್ಯರಸ್ತೆ ಬದಿಯಲ್ಲಿ ಬಸ್‍ಗಳು ನಿಲ್ಲುವುದರಿಂದ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ನಗರಪಾಲಿಕೆ ಸಿಬ್ಬಂದಿಗಳ ವಸತಿಗೃಹ ಹಳೆಯದಾಗಿದ್ದು ವಾಸಿಸಲು ಕಷ್ಟವಾಗುತ್ತದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ವೈದ್ಯ ಚಿಕಿತ್ಸಾಲಯಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ, ಆದ್ದರಿಂದ 4 ಕೋಟಿ 98 ಲಕ್ಷ ರೂ.ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ಬಸ್ ಟರ್ಮಿನಲ್ ಮತ್ತು 2 ಕೋಟಿ ರೂ.ಗಳಲ್ಲಿ ನಗರ ಪಾಲಿಕೆ ಸಿಬ್ಬಂದಿಗಳ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದವರು ಹೇಳಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್, ಮುಖಂಡರಾದ ರವಿಶಂಕರ್ ಮೀಜಾರು, ನಿತಿನ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರಿದ್ದರು.

ಮಂಗಳೂರು: ಮಂಗಳೂರಿನ ಅಭಿವೃಧ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಾಂತರ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿವೆ ಎಂದು ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದರು.

ಅವರು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 56ನೇ ಮಂಗಳದೇವಿ ವಾರ್ಡಿನಲ್ಲಿ ಮಂಗಳಾ ದೇವಿ ಬಸ್ ಟರ್ಮಿನಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ನಗರ ಪಾಲಿಕೆ ಸಿಬ್ಬಂದಿಗಳಿಗೆ ನೂತನ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಅಂತರಾಷ್ಟ್ರೀಯ ನಗರವಾಗಿರುವ ಮಂಗಳೂರಿನ ಅಭಿವೃದ್ದಿಗೆ ಸರ್ಕಾರಗಳು ಬದ್ದವಾಗಿವೆ, ಈ ದಿಸೆಯಲ್ಲಿ ನಗರಕ್ಕೆ ಅಗತ್ಯವಿರುವ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡು ಅನುಷ್ಠಾನ ಮಾಡಲಾಗುತ್ತಿದೆ, ಮಂಗಳ ದೇವಿ ದೇವಸ್ಥಾನದ ಮುಖ್ಯರಸ್ತೆ ಬದಿಯಲ್ಲಿ ಬಸ್‍ಗಳು ನಿಲ್ಲುವುದರಿಂದ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ನಗರಪಾಲಿಕೆ ಸಿಬ್ಬಂದಿಗಳ ವಸತಿಗೃಹ ಹಳೆಯದಾಗಿದ್ದು ವಾಸಿಸಲು ಕಷ್ಟವಾಗುತ್ತದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ವೈದ್ಯ ಚಿಕಿತ್ಸಾಲಯಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ, ಆದ್ದರಿಂದ 4 ಕೋಟಿ 98 ಲಕ್ಷ ರೂ.ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ಬಸ್ ಟರ್ಮಿನಲ್ ಮತ್ತು 2 ಕೋಟಿ ರೂ.ಗಳಲ್ಲಿ ನಗರ ಪಾಲಿಕೆ ಸಿಬ್ಬಂದಿಗಳ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದವರು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್, ಮುಖಂಡರಾದ ರವಿಶಂಕರ್ ಮೀಜಾರು, ನಿತಿನ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರಿದ್ದರು.