ಹಿಂದೂಗಳ ಸಮಸ್ಯೆಗಳಿಗೆ ಒಂದೇ ಪರಿಹಾರ “ಹಿಂದೂರಾಷ್ಟ್ರ” – ಶ್ರೀ.ಚೇತನ್ ರಾಜಹಂಸ ರಾಷ್ಟ್ರೀಯ ವಕ್ತಾರರು ಸನಾತನ ಸಂಸ್ಥೆ – ಕಹಳೆ ನ್ಯೂಸ್
ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ವರ್ಧಂತ್ಯೋತ್ಸವದ ಪ್ರಯುಕ್ತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ. ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ನಿಮಿತ್ತ ಶ್ರೀ ಶಾರದಾ ಭಜನಾ ಮಂದಿರ ಪುತ್ತೂರಿನಲ್ಲಿ ಪ್ರವಚನ ನಡೆಯಿತು.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ ಇವರು ಧರ್ಮಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಮತಾಂತರ, ಲವ್ ಜಿಹಾದ್,ಗೋಹತ್ಯೆ ಮುಂತಾದವುಗಳು ತಾಂಡವವಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ತಡೆಹಿಡಿಯುವ ಅವಕಾಶವಿದ್ದರೂ ವ್ಯವಸ್ಥೆ ಸರಿಯಿಲ್ಲದ ಕಾರಣ ಇದರ ತೊಂದರೆಯನ್ನು ಪ್ರತಿಯೊಬ್ಬರು ಅನುಭವಿಸುತಿದ್ದಾರೆ. ಕಾನೂನಿನ ಮುಖಾಂತರ ಹೋರಾಟ ಮಾಡಲು ಕೋರ್ಟಿನಲ್ಲಿ ಸುಮಾರು 3 ಕೋಟಿಯಷ್ಟು ಕೇಸ್ ಗಳು (ಅರ್ಜಿಗಳು) ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಇದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗಲೂ ಸಾಧ್ಯವಿದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಪ್ರತಿಯೊಬ್ಬ ಹಿಂದೂಗಳಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಧರ್ಮಾದಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಯೊಂದೇ ಗುರಿ ಎಂದು ಧರ್ಮಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.