Monday, November 25, 2024
ರಾಷ್ಟ್ರೀಯಸುದ್ದಿ

ಜ್ಞಾನವಾಪಿ ಕೇಸ್‌, ತೀರ್ಪು ಪ್ರಕಟ ;  ಹಿಂದೂ ಮಹಿಳೆಯರಿಗೆ ಗೆಲುವು – ಮಸೀದಿ ಆವರಣದಲ್ಲಿ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಯೋಗ್ಯ – ಕಹಳೆ ನ್ಯೂಸ್

– ವಾರಣಾಸಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಪ್ರಕಟ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲಕ್ನೋ: ಜ್ಞಾನವಾಪಿ ಮಸೀದಿಯ (Gyanvapi Masjid) ಆವರಣದಲ್ಲಿ ಇದೆ ಎನ್ನಲಾದ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಯೋಗ್ಯವಾಗಿದೆ ಎಂದು ಇಲ್ಲವೇ ಎನ್ನುವ ಬಗ್ಗೆ ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯ ಇಂದು ಮಹತ್ವದ ತೀರ್ಪು (Verdict) ನೀಡಿದೆ.

ಐವರು ಹಿಂದೂ ಮಹಿಳೆಯರು ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೇಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು.

ನ್ಯಾಯಾಲಯವು ಮಸೀದಿ ಸಮಿತಿ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಪೂಜಿಸುವ ಹಕ್ಕು ಕೋರಿ 5 ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು ಪ್ರಕಟಿಸಿದೆ. ಇಂದು ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಕೋರ್ಟ್ ಪೂಜೆಗೆ ಅವಕಾಶ ನೀಡಬೇಕಾ? ಬೇಡವೋ ಎಂಬ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಮುಂದಿನ ಅರ್ಜಿಯ ವಿಚಾರಣೆ ಸೆ.22 ರಂದು ನಡೆಯಲಿದೆ.

ಈ ಐದು ಮಂದಿ ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಮಸೀದಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಗಂಭೀರವಾಗಿರುವ ಹಿನ್ನಲೆ ಸುಪ್ರೀಂಕೋರ್ಟ್ (Supreme Court) ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಸೂಚಿಸಿತ್ತು.

ಈ ಹಿಂದೆ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲ್ಲೇ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು. ಮಸೀದಿಯ ಜಾಗದಲ್ಲಿ ಮಂದಿರ ಇದೆ ಎಂದು ವಾದಿಸಿದ್ದರು.

ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ. 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ಕಾಯಿದೆಯ ಅನ್ವಯ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿ 16-17 ಶತಮಾನದ ಪುರಾತನ ಧಾರ್ಮಿಕ ಪ್ರದೇಶವಾಗಿರುವ ಈ ಹಿನ್ನಲೆ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ಪೂಜೆಗೆ ಅವಕಾಶ ನೀಡಿದ್ದಲ್ಲಿ ದೇಶದಲ್ಲಿ ಇಂತಹ ಹತ್ತಾರು ವಿವಾದಾತ್ಮಕ ಪ್ರದೇಶಗಳಲ್ಲೂ ಪೂಜೆ ಅವಕಾಶ ಕೇಳುವ ಸಾಧ್ಯತೆಗಳಿರುತ್ತದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಝುಖಾನದಲ್ಲಿ ಪತ್ತೆಯಾಗಿರುವುದು ನೀರಿನ ಕಾರಂಜಿ ಮತ್ತು ಅಲ್ಲಿ ಯಾವುದೇ ಶೃಂಗಾರ ಗೌರಿ ಮೂರ್ತಿಗಳಿಲ್ಲ, ಅದು ಹಳೆಯ ವಾಸ್ತು ಶಿಲ್ಪ ಶೈಲಿಯಾಗಿದೆ ಎಂದು ವಾದ ಮಂಡಿಸಿದ್ದರು.