Monday, November 25, 2024
ಸುದ್ದಿ

ಹಿಂದೂ ಧರ್ಮಕ್ಕಾಗಿ ಧಗಧಗಿಸುವ ಬ್ರಾಹ್ಮತೇಜದ ಜ್ವಾಲೆ ಶಾಂತವಾಯಿತು ! – ಸನಾತನ ಸಂಸ್ಥೆ–  ಕಹಳೆ ನ್ಯೂಸ್

ಮುಂಬೈ – ದ್ವಾರಕಾದ ಶಾರದಾಪೀಠ ಮತ್ತು ಬದ್ರಿಕಾಶ್ರಮದ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಹಾರಾಜರ ದೇಹತ್ಯಾಗದಿಂದಾಗಿ ಹಿಂದೂ ಧರ್ಮಕ್ಕಾಗಿ ಧಗಧಗಿಸುತ್ತಿದ್ದ ಬ್ರಾಹ್ಮತೇಜದ ಜ್ವಾಲೆಯು ಶಾಂತವಾಯಿತು, ಎಂದು ಭಾವಪೂರ್ಣ ಮಾತುಗಳಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರವರು ಶಂಕರಾಚಾರ್ಯರ ಚರಣಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಧರ್ಮಸಾಮ್ರಾಟ ಕರಪಾತ್ರಿಸ್ವಾಮಿಯವರ ಶಿಷ್ಯೋತ್ತಮರಾಗಿ ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮದ ಪ್ರಚಾರ ಮತ್ತು ಧರ್ಮರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಆದಿ ಶಂಕರಾಚಾರ್ಯರ ಪರಂಪರೆಯಲ್ಲಿದ್ದ ನಾಲ್ಕು ಪೀಠಗಳಲ್ಲಿ ಎರಡು ಪೀಠಗಳ ಶಂಕರಾಚಾರ್ಯರ ಪದವಿಯನ್ನು ಧರ್ಮಶ್ರದ್ಧೆಯಿಂದ ನಿಭಾಯಿದಿದರು. ಅವರು ವಿವಿಧ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳಿಗೆ ಆಧಾರಪುರುಷರಾಗಿದ್ದರು.

೨೦೧೫ ನೇ ಇಸವಿಯಲ್ಲಿ, ಕಾ. ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ಬೇಜವಾಬ್ದಾರಿಯಿಂದ ಆರೋಪಗಳಾದಾಗ ಸ್ವತಃ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ನಾಸಿಕನ ಕುಂಭಮೇಳದಲ್ಲಿ ಸನಾತನ ಸಂಸ್ಥೆಯು ನಿರಪರಾಧಿಯೆಂದು ಮಾಧ್ಯಮಗಳ ಮುಂದೆ ದೃಢವಾಗಿ ಮಂಡಿಸಿದ್ದರು. ಅಲ್ಲದೇ ಕಾಲಕಾಲಕ್ಕೆ ಸನಾತನ ಸಂಸ್ಥೆಯ ಕಾರ್ಯಕ್ಕೆ ಶುಭಾಶೀರ್ವಾದ ನೀಡಿ ಆಧ್ಯಾತ್ಮಿಕ ಬಲವನ್ನು ಪ್ರದಾನಿಸಿದ್ದರು. ಭಾರತದಲ್ಲಿ ಸರ್ವಶ್ರೇಷ್ಠವಾಗಿರುವ ಶಂಕರಾಚಾರ್ಯಪದವಿಯಲ್ಲಿ ಆರೂಢರಾಗಿ ಅವರು ಮಾಡಿದ ಶ್ರೇಷ್ಠ ಕಾರ್ಯವನ್ನು ಇತಿಹಾಸವು ಗಮನದಲ್ಲಿಡುವುದು, ಎಂದು ಶ್ರೀ. ರಾಜಹಂಸರವರು ಹೇಳಿದ್ದಾರೆ.

ಮುಂಬೈ – ದ್ವಾರಕಾದ ಶಾರದಾಪೀಠ ಮತ್ತು ಬದ್ರಿಕಾಶ್ರಮದ ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಹಾರಾಜರ ದೇಹತ್ಯಾಗದಿಂದಾಗಿ ಹಿಂದೂ ಧರ್ಮಕ್ಕಾಗಿ ಧಗಧಗಿಸುತ್ತಿದ್ದ ಬ್ರಾಹ್ಮತೇಜದ ಜ್ವಾಲೆಯು ಶಾಂತವಾಯಿತು, ಎಂದು ಭಾವಪೂರ್ಣ ಮಾತುಗಳಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರವರು ಶಂಕರಾಚಾರ್ಯರ ಚರಣಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.