ಬಂದಾರು: ಕುಪ್ಪೆಟ್ಟಿ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಮೈರೋಳ್ತಡ್ಕ ,ಉರುವಾಲು ಮತ್ತು ಪದ್ಮುಂಜ ಶಾಲೆಗಳಿಗೆ ಸಮಗ್ರ ಪ್ರಶಸ್ತಿ – ಕಹಳೆ ನ್ಯೂಸ್
ಬಂದಾರು: ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಕುಪ್ಪೆಟ್ಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆ ಇವರ ಸಹಯೋಗದೊಂದಿಗೆ ಕುಂಟಾಲಪಲ್ಕೆ ಶಾಲೆಯಲ್ಲಿ ನಡೆದ ಕುಪ್ಪೆಟ್ಟಿ ವಲಯ ಮಟ್ಟದ ಸುಮಾರು 16 ಶಾಲೆಗಳ ವಿದ್ಯಾರ್ಥಿಗಳ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಪಡೆದುಕೊಂಡಿತು.
ಹಿರಿಯ ಪ್ರಾಥಮಿಕ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣಿಯೂರು ಪದ್ಮುಂಜ ಪಡೆದರೆ,ಕಿರಿಯ ಪ್ರಾಥಮಿಕ ವಿಭಾಗದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಶ್ರೀ ಭಾರತಿ ಶಾಲೆ ಉರುವಾಲು ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಬಂದಾರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕೆ,ಗ್ರಾ.ಪಂ.ಸದಸ್ಯರಾದ ದಿನೇಶ್ ಖಂಡಿಗ,ಮೋಹನ್ ಕೋಡ್ಯೇಲು, ಸಮಗ್ರ ಪ್ರಶಸ್ತಿಯ ಟ್ರೋಫಿಯ ಪ್ರಾಯೋಜಕರಾದ ಮುಳಿಯ ಜುವೆಲರ್ಸ್ ಬೆಳ್ತಂಗಡಿಯ ಪರವಾಗಿ ಸಿಬ್ಬಂದಿ ಗಳಾದ ಪ್ರಕಾಶ್ ಮತ್ತು ಜಯಂತ್ ಹಾಗೂ ಸಮಗ್ರ ದ್ವಿತೀಯ ಪ್ರಶಸ್ತಿಯ ಟ್ರೋಫಿಯ ಪ್ರಾಯೋಜಕರಾದ ಜಯಣ್ಣ ಗೌಡ ಮಿನಂದೇಲು,ಮೈರೋಳ್ತಡ್ಕ ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಾವತಿ,ಎಸ್.ಡಿ.ಎಂ.ಸಿ.ಸದಸ್ಯರಾದ ಶ್ರೀನಿವಾಸ ಗೌಡ ವಿಜೇತ ಶಾಲೆಗಳಿಗೆ ಪ್ರಶಸ್ತಿಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಬಹುದೊಡ್ಡ ಕೊಡುಗೆ ನೀಡಿದ ಮುಳಿಯ ಜುವೆಲರ್ಸ್ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಳೆವಿದ್ಯಾರ್ಥಿಗಳು,ವಿವಿಧ ಸಮಿತಿಯ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಗಾಯತ್ರಿ ಕೆ,ಹರಿಣಾಕ್ಷಿ ಎನ್, ರೇಷ್ಮಾ ,ಸಿ.ಆರ್.ಪಿ.ಮಹಮ್ಮದ್ ಶರೀಫ್ ಕೆ.ಪಿ.,ಮೈರೋಳ್ತಡ್ಕ ಶಾಲಾ ಶಿಕ್ಷಕ ಮಾಧವ ಗೌಡ,ಅಂಡೆತಡ್ಕ ಶಾಲಾ ಶಿಕ್ಷಕ ರಾಘು ,ಶಾಲಾ ಹಳೆ ವಿದ್ಯಾರ್ಥಿಗಳು ಸಹಕರಿಸಿದರು.