Thursday, January 23, 2025
ಸುದ್ದಿ

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ನಾಯಕತ್ವ ಕುರಿತಾಗಿ ಕಾರ್ಯಗಾರ – ಕಹಳೆ ನ್ಯೂಸ್

ಮೂಡುಬಿದಿರೆ : ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ರೂಪುರೇಷೆ, ನಾಯಕತ್ವದ ಜವಾಬ್ದಾರಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳ್ತಂಗಡಿ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಹಾಗೂ ರಾಜ್ಯಮಟ್ಟದ ತರಬೇತುದಾರರಾದ ಧರಣೇಂದ್ರ ಕೆ ಜೈನ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸತ್ತಿನ ವಿದ್ಯಾರ್ಥಿ ನಾಯಕರುಗಳಿಗೆ ಕುಮಾರವ್ಯಾಸನ ಕುಮಾರ ವ್ಯಾಸಭಾರತ ಮಾದರಿಯಾಗಲಿ, ಅದರಂತೆ ನಿಮ್ಮ ನಾಯಕತ್ವದಲ್ಲಿ ಭಾವ, ರಾಗ, ತಾಳವನ್ನು ಮೈಗೂಡಿಸಿಕೊಳ್ಳಬೇಕು ಎನ್ನುತ್ತಾ ಭಾರತದಲ್ಲಿ ನಾಯಕತ್ವದ ಕೊರತೆಯಿಲ್ಲ ಮನುಷ್ಯತ್ವದ ತತ್ವಗಳ ಕೊರತೆ ಇದೆ ಎಂದು ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿದರು. ನೀವು ಉತ್ತಮ ನಾಯಕರಾಗಬೇಕಾದರೆ ಆದರ್ಶಯುತ ಜೀವನ ಅಳವಡಿಸಿಕೊಂಡು ನೀತಿವಂತರಾಗಿ, ಸಮಯ ಪಾಲಕರಾಗಿ, ಜ್ಞಾನವಂತರಾಗಬೇಕು ಎಂದು ಹೇಳಿ ಸಂಸತ್ತಿನ ನಾಯಕರುಗಳಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಹಾಗೂ ಶಾಲಾ ಸಂಸತ್ತಿನ ಸಂಯೋಜಕರಾದ ಜಯಶೀಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶ್ಯಾಮಿಲಿ ನಿರೂಪಿಸಿ, ಶಾಲಾ ಸಂಸತ್ತಿನ ನಾಯಕಿ ಅದಿತಿ ಸ್ವಾಗತಿಸಿ, ಶಾಲಾ ಸಂಸತ್ತಿನ ಸಭಾಪತಿ ಚರಣ್ ವಂದಿಸಿದರು.