Thursday, January 23, 2025
ಸುದ್ದಿ

ದ.ಕ: ಜಿಲ್ಲಾಧಿಕಾರಿ ಮೊಬೈಲ್ ಹ್ಯಾಕ್‌ : ಎಚ್ಚರಿಕೆ ವಹಿಸುವಂತೆ ಮನವಿ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರ ಮೊಬೈಲ್‌ ಹ್ಯಾಕ್‌ ಆಗಿದ್ದು, ಅಪರಿಚಿತರು ಅವರ ಹೆಸರು ಮತ್ತು ಭಾವಚಿತ್ರವನ್ನು ಬಳಸಿ ಹಣ ಅಥವಾ ನೆರವು ಕೋರಿ ಸಂದೇಶ ಕಳುಹಿಸುತ್ತಿದ್ದಾರೆ.

‘ಅಪರಿಚಿತರು ನನ್ನ ಹೆಸರು ಮತ್ತು ಭಾವಚಿತ್ರ ಬಳಸಿ 8590710748 ನಂಬರ್ ನಿಂದ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳುತ್ತಿದ್ದಾರೆ. ಈ ನಂಬರ್‌ ನನ್ನದಾಗಿರುವುದಿಲ್ಲ. ಆದಕಾರಣ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಸಂದೇಶವನ್ನು ನಂಬಿ ಹಣವನ್ನು ವರ್ಗಾಯಿಸ ಬೇಡಿ’ ಎಂದು ರಾಜೇಂದ್ರ ಕೋರಿದರು.

‘ನನ್ ಮೊಬೈಲ್‌ ಹ್ಯಾಕ್‌ ಮಾಡಿ ಜಿ-ಮೇಲ್‌ ಖಾತೆಯಲ್ಲಿದ್ದ ಮೊಬೈಲ್‌ ಸಂಪರ್ಕಗಳನ್ನು ಪಡೆದು ಅವುಗಳಿಗೆ ನೆರವು ಕೋರಿ ಸಂದೇಶ ಕಳುಹಿಸಲಾಗುತ್ತಿದೆ. ಈ ಬಗ್ಗೆ ಸೆನ್‌ ಠಾಣೆಗೆ ದೂರು ನೀಡಿದ್ದೇನೆ’ ಎಂದು ಅವರು ತಿಳಿಸಿದರು.