Wednesday, January 22, 2025
ಸುದ್ದಿ

ಹೊಳೆಯ ಬದಿಗೆ ತೆರಳಿದ್ದ ಯುವಕ ಕಾಲು ಜಾರಿ ನೀರುಪಾಲು – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ : ಹೊಳೆಯ ಬದಿಗೆ ಹೋಗಿದ್ದ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆಯ ಹೊಳೆಯಲ್ಲಿ ನಿನ್ನೆ ನಡೆದಿದೆ.

ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕಿನ ಪವನ್ ರಾಜ್(28) ಮೃತ ದುರ್ದೈವಿ.

ಇವರು ತನ್ನ ಮನೆಯ ಪಕ್ಕದಲ್ಲೇ ಇರುವ ಹೊಳೆಯ ಬದಿಯಲ್ಲಿ ತನ್ನ ಸಂಬಂಧಿಕರೊಂದಿಗೆ ಕಲ್ಲಿನ ಬಂಡೆಯ ಮೇಲೆ ಪಾರ್ಟಿ ಮಾಡುತ್ತಾ ಎಂಜಾಯ್ ಮೂಡ್‌ನಲ್ಲಿದ್ದರು.

ಆಗ ಅಕಸ್ಮಿಕವಾಗಿ ಅವರ ಕಾಲು ಜಾರಿದ ಕಾರಣ ಅವರು ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿದ್ದಾರೆ.

ಅಚಾನಕ್ ಆಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.