Wednesday, January 22, 2025
ಸುದ್ದಿ

ಕೆಮೆಸ್ಟ್ರಿ ಫೆಸ್ಟ್‍ನ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೆಮೆಸ್ಟ್ರಿ ಫೆಸ್ಟ್ ಪ್ರಯುಕ್ತ ಆಯೋಜಿಸಲಾದ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಾಕ್ಯುಮೆಂಟರಿ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಲಕ್ಷ್ಮೀ ಅರ್ಪಣ್ ಪ್ರಥಮ ಸ್ಥಾನ, ನಿಧಿ ಬೇಟೆ(ಟ್ರೇಷರ್ ಹಂಟ್)ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ದೀಪ್ತಿಲಕ್ಷ್ಮೀ ದ್ವಿತೀಯ ಸ್ಥಾನ, ಸ್ಕ್ರಿಪ್ಟ್ ಬರವಣಿಗೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ ಎ ಕೆ ದ್ವಿತೀಯ ಸ್ಥಾನ, ಪೋಟೊಗ್ರಾಫಿ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅದಿತ್ ಆಂಚನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಐಸ್ ಬ್ರೇಕರ್ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಂಕಿತಾ ಎಂ, ಶಶಾಂಕ್ ವಿ ಎಸ್, ಯಶಸ್ ಜಿ, ಅಚಲ ಪಟೇಲ್, ಪ್ರತೀಕ್ಷಾ ಎ.ಕೆ, ಅನೀಶ್ ಪಜಿಮಣ್ಣು, ಲಕ್ಷ್ಮೀ ಅರ್ಪಣ್ , ನೇಹಾ ಭಟ್, ಮನಸ್ವಿ ಭಟ್, ಅದಿತ್ ಆಂಚನ್ , ಸಾತ್ವಿಕ ಎಂ, ಭಾರ್ಗವಿ ಬಿ ಎಸ್, ಅಂಜಲಿ ವಿ, ಅಶ್ವಿತ್ ರೈ ಎನ್, ಶ್ರುಜೇಶ್ ಕುಮಾರ್, ಪಿ.ಜಿ. ಅಯುಷ್ ರೈ, ಲಕ್ಷಿತ್, ದೀಪ್ತಿಲಕ್ಷ್ಮೀ ರವರ ತಂಡವು ತೃತೀಯ ಸ್ಥಾನವನ್ನು ಪಡೆದಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.