Recent Posts

Tuesday, January 21, 2025
ಸುದ್ದಿ

ನಮೀಬಿಯಾದಿಂದ ಭಾರತಕ್ಕೆ ಹಾರಲಿದೆ ಚೀತಾ : ಕುತೂಹಲಕಾರಿಯಾಗಿದೆ ಚೀತಾ ಪ್ರಯಾಣಿಸೋ ವಿಮಾನ..? – ಕಹಳೆ ನ್ಯೂಸ್

ಚೀತಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ವಿದೇಶದಿಂದ ಚೀತಾಗಳನ್ನ ಕರೆತರಲು ಹುಲಿ ಚಿತ್ರದ ಪಕ್ಷಿ ಸಜ್ಜಾಗಿದೆ. ಹೌದು ನಮೀಬಿಯಾದಿಂದ, ಮಧ್ಯಪ್ರದೇಶದಲ್ಲಿರುವ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆಗಳನ್ನು ಸಾಗಿಸಲು ಸಿದ್ದತೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ ಚೀತಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ವಿದೇಶದಿಂದ ಚೀತಾಗಳನ್ನ ಕರೆತರಲು ಹುಲಿ ಚಿತ್ರದ ಪಕ್ಷಿ ಸಜ್ಜಾಗಿದೆ. ಹೌದು ನಮೀಬಿಯಾದಿಂದ, ಮಧ್ಯಪ್ರದೇಶದಲ್ಲಿರುವ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆಗಳನ್ನು ಸಾಗಿಸಲು ಸಿದ್ದತೆ ನಡೆದಿದೆ.
ಭಾರತದಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಚೀತಾಗಳು 1952ರಿಂದ ದೇಶದಲ್ಲಿ ನಾಶವಾಗುತ್ತ ಹೋಗಿದ್ದು. ಇದೀಗ ಬರೋಬ್ಬರಿ 7 ದಶಕಗಳ ನಂತರ ಎಲ್ಲವೂ ಅಂದುಕೊಂಡಂತೆ ಆದರೆ ಭಾರತಕ್ಕೆ ಚೀತಾಗಳು ಮರು ಪ್ರವೇಶ ಮಾಡಲಿವೆ.
ಹೌದು, 5 ಸಾವಿರಕ್ಕೂ ಹೆಚ್ಚು ಮೈಲಿಗಳ ದೂರದಿಂದ ಅಂದರೆ ದಕ್ಷಿಣ ಆಪ್ರಿಕಾದ ನಮೀಬಿಯಾ ಭಾರತಕ್ಕೆ ಸೆ.17 ರಂದು ಚೀತಾಗಳು ನಮ್ಮ ದೇಶಕ್ಕೆ ಬರಲಿವೆ. ಇದಕ್ಕಾಗಿ B747 ಜಂಬೋ ಜೆಟ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು ನಮೀಬಿಯಾದಿಂದ, ಮಧ್ಯಪ್ರದೇಶದಲ್ಲಿರುವ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆಗಳನ್ನು ಸಾಗಿಸಲು ಸಿದ್ಧವಾಗಿದೆ.
ಎಂಟುಚೀತಾಗಳ ಪೈಕಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ರಾಜಸ್ಥಾನದ ಜೈಪುರಕ್ಕೆ ಸೆಪ್ಟೆಂಬರ್ 17 ರಂದು ಸರಕು ವಿಮಾನದಲ್ಲಿ ಇಂಟರ್-ಕಾಂಟಿನೆಂಟಲ್ ಟ್ರಾನ್ಸ್ಲೊಕೇಶನ್ ಯೋಜನೆಯ ಭಾಗವಾಗಿ ತರಲಾಗುತ್ತಿದ್ದು, ಆ ಬಳಿಕ ಅವುಗಳನ್ನು ಜೈಪುರದಿಂದ ಹೆಲಿಕಾಪ್ಟರ್‍ಗಳಲ್ಲಿ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚಿರತೆಗಳನ್ನು ಬಿಡಲಿದ್ದಾರೆ. ಚಿರತೆಗಳನ್ನು ಭಾರತಕ್ಕೆ ಕರೆತರುವ ವಿಮಾನದ ಮುಖ್ಯ ಕ್ಯಾಬಿನ್ ನ್ ಗಳಲ್ಲಿ ಪಂಜರಗಳಿರುವಂತೆ ಮಾರ್ಪಡಿಸಲಾಗಿದೆ. ಹೊರಭಾಗಕ್ಕೆ ಹುಲಿಯ ಚಿತ್ರ ಬಿಡಿಸಲಾಗಿದೆ.
ವಿಮಾನವು 16 ಗಂಟೆಗಳವರೆಗೆ ಹಾರುವ ಸಾಮಥ್ರ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು, ಇಂಧನ ತುಂಬಲು ನಿಲುಗಡೆ ಇಲ್ಲದೆ ನೇರವಾಗಿ ನಮೀಬಿಯಾದಿಂದ ಭಾರತಕ್ಕೆ ಹಾರಬಲ್ಲ ಸಾಮಥ್ರ್ಯವಿದೆ. ಇನ್ನು ಪ್ರಯಾಣ ವೇಳೆ ಚೀತಾಗಳ ಯೋಗಕ್ಷೇಮವನ್ನು ಪ್ರಮುಖ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದ್ದು , ಹೀಗಾಗಿ ಚೀತಾ ತನ್ನ ಸಂಪೂರ್ಣ ಪ್ರಯಾಣದ ಅವಧಿಯನ್ನು ಖಾಲಿ ಹೊಟ್ಟೆಯಲ್ಲಿ ಕಳೆಯಬೇಕಾಗುತ್ತದೆ ಎಂದು ಭಾರತೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.