Recent Posts

Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣ ; ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಎನ್ನಲಾಗಿ ಬಂಧಿಸಲ್ಪಟ್ಟಿದ್ದ ಬಂಟ್ಚಾಳದ ಅಮಾಯಕ ಹಿಂದೂ ಯುವಕನಿಗೆ ಜಾಮೀನು..!! – ಕಹಳೆ ನ್ಯೂಸ್

ಮಂಗಳೂರು; ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣದ ಆರೋಪದಲ್ಲಿ ಬಂಧಿತ ಅಮಾಯಕ ಹಿಂದೂ ಯುವಕನಿಗೆ ಜಾಮೀನು ಸಿಕ್ಕಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆ ಆರೋಪಿಗಳಿಗೆ ಆಶ್ರಯ‌ ನೀಡಿದ್ದಾನೆ ಎನ್ನಲಾದ ಬಂಟ್ವಾಳದ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ನೀಡಿದೆ. 50,000 ರೂ ಶೂರಿಟಿ ಬಾಂಡ್ ಮತ್ತು ಸಾಕ್ಷಿಗೆ ಬೆದರಿಕೆ ಹಾಕದಂತೆ ಸೂಚಿಸಿ ಜಾಮೀನು‌‌ ನೀಡಿರುವ ಬಗ್ಗೆ ವರದಿಯಾಗಿದೆ‌‌.

ಸುರತ್ಕಲ್ ನಲ್ಲಿ ಫಾಝಿಲ್‌ನನ್ನು ತಂಡವೊಂದುಜು.28ರಂದು ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆ ಪೈಕಿ ಹರ್ಷಿತ್‌ಗೆ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದ್ದು, ಸೆ.13ರಂದು ಜೈಲಿನಿಂದ ಬಿಡುಗಡೆಗೊಂಡಿದ್ದಾನೆ ಎಂದು ತಿಳಿದು ಬಂದಿದೆ.