Recent Posts

Sunday, January 19, 2025
ಸುದ್ದಿ

ಉಪ್ಪಿನಂಗಡಿಯ ಯುವತಿಯ ನಗ್ನ ಫೋಟೋವನ್ನು ವೈರಲ್ ಮಾಡಿದ 3 ದುಷ್ಕರ್ಮಿಗಳು ಅಂದರ್ – ಕಹಳೆ ನ್ಯೂಸ್

ಮಂಗಳೂರು, ಜು13: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಯುವತಿಯೊಬ್ಬಳ ನಗ್ನ ಫೋಟೋವನ್ನು ವೈರಲ್ ಮಾಡಿದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಂದೇಶ್, ಜಗದೀಶ್ ಮತ್ತು ನವೀನ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದೇಶ್ ಯುವತಿಯನ್ನು ಪರಿಚಯ ಮಾಡಿಕೊಂಡು, ಆಕೆಯನ್ನು ಪುಸಲಾಯಿಸಿ ನಗ್ನ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದನು. ತದ ನಂತರ ಆಕೆಯ ನಗ್ನ ಚಿತ್ರಗಳನ್ನು ಸಂದೇಶ್ ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಹಂಚಿಕೊಂಡಿದ್ದನು. ಮಾತ್ರವಲ್ಲ ಈ ಮೂವರು ಆರೋಪಿಗಳು ಜೊತೆ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವತಿಯ ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.