Sunday, November 24, 2024
ಸುದ್ದಿ

ಭಾರತಮಾತೆಯನ್ನು ಅವಮಾನಿಸುವವರನ್ನು ಕರೆದೊಯ್ದು ಕಾಂಗ್ರೆಸ್ ‘ಭಾರತ ಜೊಡೊ’ದ ಯಾವ ಪ್ರಯತ್ನ ಮಾಡುತ್ತಿದೆ ? : ಶ್ರೀ. ನರೇಂದ್ರ ಸುರ್ವೆ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ – ಕಹಳೆ ನ್ಯೂಸ್

ಭಾರತಮಾತೆಯನ್ನು ಅವಮಾನಿಸುವವರನ್ನು ಕರೆದೊಯ್ದು ಕಾಂಗ್ರೆಸ್ ‘ಭಾರತ ಜೊಡೊ’ದ ಯಾವ ಪ್ರಯತ್ನ ಮಾಡುತ್ತಿದೆ ? – ಶ್ರೀ. ನರೇಂದ್ರ ಸುರ್ವೆ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ75 ವರ್ಷಗಳ ಹಿಂದೆ ನಮ್ಮ ದೇಶದ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಪಕ್ಷವು ‘ಭಾರತ ತೇರೆ ತುಕಡೆ ಹೊಂಗೆ’ ಎಂದು ಘೋಷಣೆ ಮಾಡುತ್ತಿರುವ ಕನ್ಹಯ್ಯಾ ಕುಮಾರನೊಂದಿಗೆ ‘ಭಾರತ್ ಜೋಡೋ’ ಯಾತ್ರೆಯನ್ನು ಪ್ರಾರಂಭಿಸುತ್ತಿದೆ. ಭಾರತಮಾತೆಯನ್ನು ‘ಅಪವಿತ್ರ’ ಎಂದು ಹೇಳುವ ಮತ್ತು ಯೇಸುವನ್ನು ಮಾತ್ರ ನಂಬುವ ಪಾದ್ರಿ ಜಾರ್ಜ್ ಪೊನ್ನಯ್ಯ ಅವರು ಹಿಂದೂ ದೇವರು ಮತ್ತು ದೇವತೆಗಳ ಅಸ್ತಿತ್ವವನ್ನು ಪ್ರಶ್ನಿಸುತ್ತಾರೆ. ಜಾರ್ಜ್ ಪೊನ್ನಯ್ಯ ಅವರಂತಹ ಪಾದ್ರಿಯ ಜೊತೆಗೆ ರಾಹುಲ ಗಾಂಧಿ ಯಾತ್ರೆ ಕೈಗೊಂಡಾಗ ಅವರ ಉದ್ದೇಶದ ಬಗ್ಗೆಯೇ ಪ್ರಶ್ನೆ ಉದ್ಭವಿಸುತ್ತದೆ. ಭಾರತಮಾತೆಯನ್ನು ಅವಮಾವನಿಸುವ ಇಂತಹವರನ್ನು ಸೇರಿಸಿಕೊಂಡು ‘ಭಾರತ ಜೋಡೊ’ದ ಬಗ್ಗೆ ಕಾಂಗ್ರೆಸ್ ಏನು ಪ್ರಯತ್ನ ಮಾಡುತ್ತಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ರಾಜ್ಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಖಂಡತುಂಡವಾಗಿ ಪ್ರಶ್ನಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಭಾರತ ತೋಡೋ’ದಲ್ಲಿ ಭಾಗವಹಿಸುವ ಜಾರ್ಜ್ ಪೊನ್ನಯ್ಯ ಅವರಂತಹ ಕ್ರೈಸ್ತ ಪಾದ್ರಿ !’ ಎಂಬ ವಿಷಯದ ಕುರಿತು  ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಭಾರತ ವಾಯ್ಸ್’ನ ಸಂಸ್ಥಾಪಕಿ ಗಾಯತ್ರಿ ಎನ್. ಇವರು ಮಾತನಾಡುತ್ತಾ, ಪಾದ್ರಿ ಜಾರ್ಜ್ ಪೊನ್ನಯ್ಯರವರು ಇತ್ತೀಚೆಗೆ ಭಾರತಮಾತೆಯನ್ನು ಅವಮಾನಿಸುವ ಹೇಳಿಕೆ ನೀಡಿದ್ದರು. ಒಂದು ವರ್ಷದ ಹಿಂದೆಯೂ ಅವರು ಭಾರತಮಾತೆ ಬಗ್ಗೆ ಬೈಗುಳ ನೀಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಾವು ತಾಯಿ ಎಂದು ಭಾವಿಸುವ ಭೂಮಿಯ ಬಗ್ಗೆ ದ್ವೇಷದ ಹೇಳಿಕೆ ನೀಡುವ ಈ ಪಾದ್ರಿಯ ಮನಸ್ಥಿತಿಯನ್ನು ಇದು ತೋರಿಸುತ್ತದೆ. ‘ಜೀಸಸ್’ನನ್ನು ಎಲ್ಲರೂ ಒಪ್ಪಬೇಕು’, ಇದನ್ನು ಎಲ್ಲರ ಮೇಲೆ ಹೇರಲು ಕ್ರೈಸ್ತರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮೊದಲು ಇವರು ‘ಇನ್‌ಕ್ವಿಸಿಶನ್’ ಮಾಡುತ್ತಿದ್ದರು, ಈಗ ಬೇರೆ ಪದ್ದತಿಯಲ್ಲಿ ಜೀಸಸ್ ಮತ್ತು ಅವರ ಪಂಥವನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಇಂದು ದಕ್ಷಿಣ ಭಾರತದಲ್ಲಿ ಶಾಲೆಗಳಲ್ಲಿಯೂ ಹಿಂದೂ ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಕ್ರೈಸ್ತ ಧರ್ಮವನ್ನು ಕಡ್ಡಾಯಗೊಳಿಸಲಾಗುತ್ತಿದೆ, ಇದೆಲ್ಲವೂ ನಿಲ್ಲಬೇಕು ಎಂದು ಹೇಳಿದರು.