ಪುತ್ತೂರು: ಕುಂದಾಪುರ ಮೂಲದ ಮುಸ್ಲಿಂ ಯುವಕನಿಗೆ ಹಿಂದೂ ಯುವತಿಯ ಸಂಪರ್ಕ; ಕೆಲಸದ ಆಸೆ ಒಡ್ಡಿ ಲವ್ ಜಿಹಾದ್ ಗೆ ಯತ್ನ; ಜಾಗರಣ ವೇದಿಕೆ ಕಾರ್ಯಾಚರಣೆ- ಕಹಳೆ ನ್ಯೂಸ್
ಪುತ್ತೂರಿನ ತಿಂಗಳಾಡಿನಲ್ಲಿ ಅನ್ಯಕೋಮಿನ ಯುವಕ ಹಿಂದೂ ಯುವತಿಗೆ ಕಿರುಕುಳ ನೀಡಿದ ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿರುವ ನಡುವೆ ಇದೀಗ ಪುತ್ತೂರಿನಲ್ಲಿ ಮತ್ತೊಂದು ಲವ್ ಜಿಹದ್ ಪ್ರಕರಣ ಬೆಳಕಿಗೆ ಬಂದಿದೆ.
ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಕುಂದಾಪುರ ಮೂಲದ ಹಿಂದೂ ಯುವತಿ ಹಾಗೂ ಕೋಟೇಶ್ವರದ ಮುಸ್ಲಿಂ ಹುಡುಗ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಜಾಗರಣ ವೇದಿಕೆಯ ಕಾರ್ಯಕರ್ತರು ಮುಸ್ಲಿಂ ವ್ಯಕ್ತಿಯನ್ನು ತಡೆದು ವಿಚಾರಿಸಿದಾಗ ಲವ್ ಜಿಹಾದ್ ವಿಷಯ ಬಯಲಾಗಿದೆ. ಇನ್ನು ಮುಸ್ಲಿಂ ಯುವಕ ಅಮೀರ್ ಎಂದು ತಿಳಿದು ಬಂದಿದೆ. ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡುವ ಆಮಿಷ ಒಡ್ಡಿ ಈತ ಲವ್ ಜಿಹಾದ್ಗೆ ಯತ್ನಿಸಿದ್ದಾನೆ. ಹಲವು ಕಡೆಗಳಲ್ಲಿ ಇವರಿಬ್ಬರು ಸುತ್ತಾಡಿಕೊಂಡಿದ್ದರು ಅನ್ನೋದು ತಿಳಿದು ಬಂದಿದೆ. ಇನ್ನು ಇವರಿಬ್ಬರ ಬಗ್ಗೆ ತಿಳಿದಿದ್ದ ಕುಂದಾಪುರದ ಹಿಂದೂ ಸಂಘಟನೆಗಳು ಪುತ್ತೂರಿನ ಹಿಂದೂ ಸಂಘಟನೆಯವರಿಗೆ ಮಾಹಿತಿಯನ್ನ ನೀಡಿದ್ರು. ಇದೀಗ ಇವರಿಬ್ಬರನ್ನು ಹಿಂದೂ ಕಾರ್ಯಕರ್ತರು ಪುತ್ತೂರು ಪೊಲೀಸರಿಗೆ ಒಪ್ಪಿಸಿದ್ದು, ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಠಾಣೆಯ ಮುಂದೆ ಜಮಾಯಿಸಿದ್ದಾರೆ.