ಉಡುಪಿ : ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿದ್ದ ವ್ಯಕ್ತಿಯೊರ್ವರಿಗೆ ಅನಾಥ ಸ್ಥಿತಿ ಎದುರಾದರಿಂದ ಆಸ್ಪತ್ರೆಯಲ್ಲಿಯೇ ನೆಲೆಕಂಡಿದ್ದರು. ಜಿಲ್ಲಾಡಳಿತದ ಆದೇಶದಂತೆ ಆ ವ್ಯಕ್ತಿಯನ್ನು ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆಗೆ, ಹಿರಿಯ ನಾಗರಿಕರ ಸಹಾಯವಾಣಿ ಸಿಬ್ಬಂದಿಗಳು ದಾಖಲುಪಡಿಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ನೆರವಾದರು.
ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಕೆಲವು ರೋಗಿಗಳು ಗುಣಮುಖರಾದರೂ ಅಸಹಾಯಕತೆಯ ಕಾರಣದಿಂದ ಆಸ್ಪತ್ರೆಯಲ್ಲಿಯೇ ಠಿಕಾಣಿ ಹೂಡಿದ್ದರು. ತಾವು ಅನಾಥರು ತಮಗೆ ನೆಲೆ ಇಲ್ಲ, ಹೋಗುದಾದರು ಏಲ್ಲಿಗೆ..? ಎನ್ನುವ ಕಾರಣ ನೀಡುತ್ತಿದ್ದರು. ಹೈಕೋರ್ಟಿನ ನ್ಯಾಯಾಧೀಶರ ಆದೇಶದ ಮೆರೆಗೆ ಜಿಲ್ಲಾಡಳಿತವು ಜಿಲ್ಲಾಸ್ಪತ್ರೆಯಲ್ಲಿ ನೆಲೆಕಂಡಿರುವ ಅನಾಥ ವ್ಯಕ್ತಿಗಳನ್ನು ಪುರ್ನವಸತಿ ಕೇಂದ್ರಗಳಿಗೆ ದಾಖಲುಪಡಿಸಲು ವ್ಯವಸ್ಥೆಗೊಳಿಸಿತು.