ಡಾ .ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಮಾಂಡವಿ ಅಕ್ರೂ ಪ್ಲೀಸ್ ಉಡುಪಿಯಲ್ಲಿ ಬಾವಿಗಳಿಗೆ ಪುನರ್ ಭರಣ ಸೇವಾಕಾರ್ಯ -ಕಹಳೆ ನ್ಯೂಸ್
ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿದೆ. ಇದಿಗ ಒಂದಾದ ಜಲಸಂರಕ್ಷಣೆ ಅಭಿಯಾನದ ನೂರಾರು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಶಿಬಿರವನ್ನು ನಡೆಸುತ್ತಿದ್ದು, ಮಾಂಡವಿ ಅಕ್ರೂ ಪ್ಲೀಸ್ ಕಟ್ಟಡ ಉಡುಪಿಯಲ್ಲಿ ಎರಡು ಬಾವಿಗಳಿಗೆ ಪ್ರತಿಷ್ಠಾನದ ಸಹಕಾರದೊಂದಿಗೆ ಜಲಪುರ್ ಭರಣ ಮಾಡಿಸಿದೆ. ಇನ್ನು ಉಡುಪಿ ಭಾಗದಲ್ಲಿ ಬೇಕಾದಷ್ಟು ಮಳೆ ನೀರು ಬೀಳುತ್ತಿದ್ದು ಇದನ್ನು ಸದ್ಬಳಕೆ ಮಾಡಬೇಕು. ನಮ್ಮ ಅಳಿಲು ಸೇವೆಯನ್ನು ಮನಗಂಡು ಎಲ್ಲಾ ನಾಗರಿಕರು ತಮ್ಮ ತಮ್ಮ ಮನೆ ,ತೋಟ, ಇನ್ನಿತರ ಕಡೆಗಳಲ್ಲಿ ಬೀಳುವ ಮಳೆನೀರನ್ನು ಬಾವಿ, ಬೋರ್ವೆಲ್ ಮತ್ತು ಇಂಗುಗು0ಡಿಗಳ ಮುಖಾಂತರ ನೀರನ್ನು ರಕ್ಷಿಸುವ ಮಿತವಾಗಿ ಬಳಸುವ , ಅಶುದ್ಧ ಗೊಳಿಸದೆ ಕಾಪಾಡುವ ಬಲುದೊಡ್ಡ ಸೇವಾಕಾರ್ಯವನ್ನು ಮಾಡುವಲ್ಲಿ ಸಾರ್ವಜನಿಕರು ಏನೇ ಮಾಹಿತಿ ಬೇಕಾದರೂ ಪ್ರತಿಷ್ಠಾನದ ನೀಡುವಲ್ಲಿ ಸದಾ ಬದ್ಧವಾಗಿರುತ್ತದೆ ಎಂದು ಪ್ರತಿಷ್ಠಾನ ವತಿಯಿಂದ ತಿಳಿಸಿದ್ದಾರೆ. ಇನ್ನು ಮಾಂಡವಿ ಅಕ್ರೂ ಪ್ಲೀಸ್ ಕಟ್ಟಡದಲ್ಲಿ ನೀರಿನ ಅವಶ್ಯಕತೆಯನ್ನು ನಾವು ಅರಿತಿದ್ದೇವೆ , ಆದ್ದರಿಂದ ಎಲ್ಲರೂ ಮಳೆ ನೀರು ಕೊಯ್ಲು ಮಾಡುವಲ್ಲಿ ಉತ್ಸುಕರಾಗಿರಬೇಕೆಂದು ಮಾಂಡವಿ ಅಕ್ರೂ ಪ್ಲೀಸ್ ಮಾಲಕರ ಸಂಘದ ಅಧ್ಯಕ್ಷರಾದ ಹೆಚ್. ಸುಕುಮಾರ್ ಶೆಟ್ಟಿ ಅವರು ಹೇಳಿದ್ರು. ಉಪಾಧ್ಯಕ್ಷ ಸತೀಶ್ ಹೆಗ್ಡೆ , ಕಾರ್ಯದರ್ಶಿ ರಾಘವ ನಾಯಕ್ ಮತ್ತು ಮೆಲ್ವಿನ್ ಡಿ ಸೋಜಾ ಮತ್ತು ಲಾನ್ಸ್ ಯವರು ಮತ್ತು ಪ್ರತಿಷ್ಠಾನದ ಶ್ರೀ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು .