Monday, January 20, 2025
ಸುದ್ದಿ

ಭಾರತದಲ್ಲಿ ಮತ್ತೆ ಕಾಣಿಸಿಕೊಂಡ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು…! – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತಕ್ಕೆ ಇಂದು ಜಂಬೋಜೆಟ್ ಬಂದಿಳಿದಿದೆ. ಭಾರತದಲ್ಲಿ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ ಸುಸಂರ‍್ಭ ಬಂದಿದೆ. ನಮೀಬಿಯಾ ದೇಶದಿಂದ 8 ಚಿರತೆಗಳನ್ನು ಹೊತ್ತ ವಿಶೇಷ ಚರ‍್ಟರ‍್ಡ್ ಕರ‍್ಗೋ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಇಂದು ಬೆಳಗ್ಗೆ ಬಂದಿಳಿದಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚೀತಾಗಳನ್ನು ಮರು-ಪರಿಚಯಿಸಿದ್ದು, ಈ ದಶಕದಲ್ಲಿ ವನ್ಯಜೀವಿಗಳ ಅತಿದೊಡ್ಡ ಐತಿಹಾಸಿಕ ಘಟನೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಮಧ್ಯಪ್ರದೇಶಕ್ಕೆ ಇದಕ್ಕಿಂತ ದೊಡ್ಡ ಕೊಡುಗೆ ಇಲ್ಲ. ಅಳಿದು ಹೋದ ಚೀತಾಗಳನ್ನು ಮತ್ತೆ ಪರಿಚಯಿಸುವ ಇದು ಐತಿಹಾಸಿಕ ಹೆಜ್ಜೆಯಾಗಿದೆ. ಇದು ಮಧ್ಯಪ್ರದೇಶದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬೂಸ್ಟ್ ನೀಡಲಿದೆ ಎಂದರು.ಭಾರತವು ಹಿಂದೆ ಏಷ್ಯಾಟಿಕ್ ಚೀತಾಗಳ ನೆಲೆಯಾಗಿತ್ತು, ಆದರೆ 1952 ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ನರ‍್ನಾಮವಾಗಿದೆ ಎಂದು ಘೋಷಿಸಲಾಯಿತು. ಪ್ರಾಜೆಕ್ಟ್ ಚೀತಾ ಎಂಬ ಖಂಡಾಂತರದಿಂದ ಸ್ಥಳಾಂತರ ಯೋಜನೆಯ ಭಾಗವಾಗಿ ನಮೀಬಿಯಾದಿಂದ ಚೀತಾ ಭಾರತಕ್ಕೆ ತರಲಾಗಿದೆ ಇದು ವಿಶ್ವದ ಮೊದಲ ಅಂತರ್-ಖಂಡಗಳ ದೊಡ್ಡ ಕಾಡು ಮಾಂಸಾಹಾರಿಗಳ ಸ್ಥಳಾಂತರ ಯೋಜನೆಯಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ ಎನ್ನಲಾಗಿದೆ.