ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ, ಆದರ್ಶ ಅಂಗನವಾಡಿ ಅಭಿಯಾನ ನಿನ್ನೆ ನಡೆದಿದ್ದು, ನರಿಕೊಂಬು ಮಹಾಶಕ್ತಿ ಕೇಂದ್ರದ ಗೊಳ್ತಾಮಜಲು ಗ್ರಾಮದ ಕಲ್ಲಡ್ಕ ಶಾಲಾ ಅಂಗನವಾಡಿಯನ್ನು ದತ್ತು ತೆಗೆದುಕೊಳ್ಳಲಾಗಿದೆ. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕರಾದ ರಾಜೇಶ್ ನಾಯ್ಕ್ ರವರು ಮೋದಿಜಿಯವರು ವಿಶ್ವನಾಯಕ ನರೇಂದ್ರ ಮೋದಿಯವರ ಕನಸನ್ನು ಸಾಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅಂಗನವಾಡಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಡನ್ನು ಬೇಬಿ ಹಾರ್ದಿವಿಗೆ ಶಾಸಕರು ವಿತರಣೆ ಮಾಡಿದರು. ಎರಡು ಅಂಗವಿಕಲರನ್ನು ಗೌರವಿಸಲಾಯಿತು. ವೀರಕಂಬದ ಪುನರ್ವಸತಿ ಕಾರ್ಯಕರ್ತೆ ಕುಸುಮಾವತಿಯವರು ಹುಟ್ಟುವಾಗಲೇ ಇವರಿಗೆ ಒಂದು ಕೈ ಇಲ್ಲ ಮತ್ತು ಅಮ್ಟೂರು ಗ್ರಾಮದ ಶಶಿಕಲಾ ಇವರು ಹುಟ್ಟುವಾಗಲೇ ಎರಡು ಕಣ್ಣು ಕಾಣಿಸುವುದಿಲ್ಲ ಇವರು ಕುರುಡ ಮಕ್ಕಳಿಗೆ ಬ್ರೈಲ್ ಲಿಪಿ ಕಲಿಸುತ್ತಾರೆ. ಇವರಿಬ್ಬರಿಗೆ ಶಾಲು ಹಣ್ಣು-ಹಂಪಲು ಮತ್ತು ಸ್ವಲ್ಪ ಧನಸಹಾಯ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ ಮತ್ತು ರವಿಶ್ ಶೆಟ್ಟಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರಾಜ್ಯ ನಿರ್ದೇಶಕರಾದ ಸುಲೋಚನಾ ಜಿಕೆ ಭಟ್, ಚಂದ್ರಾವತಿ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಭಾರತೀಯ ಚೌಟ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸುಧಾ, ಹಿರಿಯರಾದ ಕಮಲಾಕ್ಷಿ ಅಕ್ಕ, ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್, ಉಪಾಧ್ಯಕ್ಷರಾದ ಲಕ್ಷ್ಮಿ ವಿ ಪ್ರಭು, ಗೌರವಾನ್ವಿತ ಪಂಚಾಯತ್ ಸದಸ್ಯರು ಮತ್ತು ಸ್ತ್ರೀಶಕ್ತಿ ಗುಂಪಿನ ಸದಸ್ಯರು ಉಪಸ್ಥಿತಿ ಇದ್ದರು.