Monday, November 25, 2024
ಸುದ್ದಿ

ಇ ಖಾತಾ ತಂತ್ರಾಂಶದ ಲೋಪ ದೋಷ ಸರಿಪಡಿಸಲು ಅಧಿಕಾರಿಗಳೊಂದಿಗೆ ಮಂಗಳೂರು ಶಾಸಕ ಸಭೆ –ಕಹಳೆ ನ್ಯೂಸ್

ಹೊಸದಾಗಿ ಇ ಖಾತಾ ತಂತ್ರಾಂಶವನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಕೆಲವೊಂದು ಲೋಪ ದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರಿಪಡಿಸುವ ದೃಷ್ಟಿಯಿಂದ ಮಂಗಳೂರು ಶಾಸಕರ ಉಪಸ್ಧಿತಿಯಲ್ಲಿ ಸಂಬಂಧಪಟ್ಟ ತಂತ್ರಾಂಶ ಅಭಿವೃದ್ಧಿ ಕಂಪನಿಯ ಪ್ರಮುಖರು, ಅಧಿಕಾರಿಗಳ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇ ಖಾತಾ ಸಂಬಂಧಿತ ಎಲ್ಲಾ ಲೋಪದೋಷಗಳನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿ ಹೊಸದಾಗಿ ಅನುಷ್ಠಾನ ಮಾಡಿರುವ ತಂತ್ರಾಂಶದಲ್ಲಿ ಇ ಖಾತಾವನ್ನು ನೀಡಲು ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ಇ ಖಾತಾ ಸುಲಲಿತವಾಗಿ ನಡೆಯುವವರೆಗೆ ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕ ಸೇವೆ ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ, ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಆಯುಕ್ತರಾದ ಅಕ್ಷಯ್ ಶ್ರೀಧರ್, ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಹನುಮಂತ ಕಾಮತ್ ಅಧಿಕಾರಿಗಳು ಉಪಸ್ಥಿತರಿದ್ದರು.