Recent Posts

Tuesday, January 21, 2025
ಸುದ್ದಿ

ಲಿಫ್ಟ್‌ ನಲ್ಲಿ ಸಿಲುಕಿ ಟೀಚರ್‌ ಸಾವು –ಕಹಳೆ ನ್ಯೂಸ್

ಶಾಲೆಯಲ್ಲಿ ಹಾಕಲಾಗಿದ್ದ ಲಿಫ್ಟ್‌ ನಲ್ಲಿ ಸಿಲುಕಿ 26 ವರ್ಷದ ಯುವ ಟೀಚರ್‌ ಮೃತಪಟ್ಟ ಆಘಾತಕಾರಿ ಘಟನೆ ಮುಂಬೈನಲ್ಲಿ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಮುಂಬೈನ ಮಲಡ್‌ ಬಳಿಯ ಚಿಂಚೊಳ್ಳಿ ಬಂದರ್‌ ಬಳಿಯ ಸೇಂಟ್‌ ಮೇರಿಸ್‌ ಇಂಗ್ಲೀಷ್‌ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ.

ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ 2ನೇ ಮಹಡಿಗೆ ಹೋಗಲು ಶಾಲೆಯ 6 ಮಹಡಿಯಲ್ಲಿ ಲಿಫ್ಟ್‌ ಗೆ ಕಾಯುತ್ತಿದ್ದ ಜೆನೆಲ್‌ ಫರ್ನಾಂಡೀಸ್‌ ಲಿಫ್ಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಬಾಗಿಲು ಹಾಕಿಕೊಂಡಿದೆ.

ಲಿಫ್ಟ್‌ ಬಾಗಿಲು ಹಾಕಿಕೊಂಡಾದ ಟೀಚರ್‌ ಕಾಲು ಬಾಗಿಲ ನಡುವೆ ಸಿಲುಕಿಕೊಂಡಿದೆ. ಲಿಫ್ಟ್‌ ಕಳಗೆ ಹೋದಂತೆ ಟೀಚರ್‌ ಅವರ ತಲೆ ಬಡಿದು ನಜ್ಜುಗುಜ್ಜಾಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ.

ಲಿಫ್ಟ್‌ ನಲ್ಲಿ ಟೀಚರ್‌ ಸಿಲುಕಿಕೊಂಡಿರುವುದು ತಿಳಿಯುತ್ತಿದ್ದಂತೆ ಶಾಲೆಯ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯದಲ್ಲೇ ಅಸುನೀಗಿದ್ದಾರೆ.

ಪೊಲೀಸರು ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಒಂದು ವೇಳೆ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.