Tuesday, January 21, 2025
ಸುದ್ದಿ

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕುಂದಾಪುರ : ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನದ ಅಂಗವಾಗಿ ಆದರ್ಶ ಅಂಗನವಾಡಿ ಅಭಿಯಾನದಡಿ ಅಂಗನವಾಡಿ ದತ್ತು ಸ್ವೀಕಾರ ಸಮಾರಂಭ– ಕಹಳೆ ನ್ಯೂಸ್

ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮದಿನದ ಅಂಗವಾಗಿ ಆದರ್ಶ ಅಂಗನವಾಡಿ ಅಭಿಯಾನದಡಿ ಅಂಗನವಾಡಿ ದತ್ತು ಸ್ವೀಕಾರ ಸಮಾರಂಭವು ಕೋಟೇಶ್ವರದ ಹೊಸ ಬಡಾಕೆರೆಯ ಕುಂಬ್ರಿ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿ ಮತ್ತು ಹಣ್ಣುಹಂಪಲನ್ನು ವಿತರಿಸಲಾಯಿತು. ಈ ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಕುಂದುಕೊರತೆಗಳ ಮನವಿಯನ್ನು ಸ್ವೀಕರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ರೂಪ ಪೈ ಇವರು ವಹಿಸಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನ ಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್, ಮಂಡಲದ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ಮತ್ತು ಸಂಚಾಲಕಿ ಸೌರಭಿ ಪೈ ಮತ್ತು ಜಯಲಕ್ಷ್ಮಿ ಗಾಣಿಗ, ಕೋಟೇಶ್ವರ ಪಂಚಾಯತ್ ಉಪಾಧ್ಯಕ್ಷರು ಮತ್ತು ಸಹ ಸಂಚಾಲಕಿ ರಾಗಿಣಿ, ಪಂಚಾಯತ್ ಸದಸ್ಯರು ಪುರಸಭೆ ಸದಸ್ಯ ಶ್ವೇತಾ ಸಂತೋಷ್, ಮಂಡಲದ ಕಾರ್ಯದರ್ಶಿ ಆಶಾಲತಾ ನಾಯಕ್, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಲತಾ ಶೆಟ್ಟಿ , ಮಹಿಳಾಮೋರ್ಚಾದ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಅಂಗನವಾಡಿ ಆಶಾ ಕಾರ್ಯಕರ್ತರು ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.