Recent Posts

Sunday, January 19, 2025
ಸುದ್ದಿ

Big Breaking : ಉಡುಪಿಯ ಸಂತೆಕಟ್ಟೆಯಲ್ಲಿ ಭೀಕರ ರಸ್ತೆ ಅಪಘಾತ ಎರಡು ಬಲಿ ; ಇನ್ನುಳಿದವರ ಸ್ಥಿತಿ ಗಂಭೀರ – ಕಹಳೆ ನ್ಯೂಸ್

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗುಂಡಿಯನ್ನು ತಪ್ಪಿಸಲು ಹೋದ ಪರಿಣಾಮ ಕಾರು ಹಾಗೂ ಟೆಂಪೋ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿ ಇಬ್ಬರು ದಾರುಣವಾಗಿ ಸಾವನಪ್ಪಿದ್ದಾರೆ‌. ಉಡುಪಿಯ ಸಂತೆಕಟ್ಟೆಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರು ಚಾಲಕ ಅನೂಪ್ (೨೮), ಟೆಂಪೊ‌ ಚಾಲಕ ಅಶೋಕ್ (೫೫) ಮೃತ ದುರ್ದೈವಿಗಳು. ಸುಂದರ್ ಎಂಬವರ ಟೆಂಪೊವನ್ನು ಅಶೋಕ್ ಎಂಬಾತ ಕೂಲಿ ಕಾರ್ಮಿಕರೊಂದಿಗೆ ಉಡುಪಿ ಕಡೆಗೆ ಬರುತ್ತಿದ್ದಾಗ ಬ್ರಹ್ಮಾವರದ ಕಡೆಗೆ ಮಣಿಪಾಲದ ಕೆಎಂಸಿಯಲ್ಲಿ ವೈಧ್ಯಕೀಯ ವಿದ್ಯಾರ್ಥಿಯಾಗಿರುವ ಗೌತಮ್ (೨೮)ಎಂಬ ಯುವಕ ಕಾರನ್ನು‌ ಅತೀ‌ ವೇಗವಾಗಿ ಚಲಾಯಿಸಿ‌ ಎದುರು ಏಕಾಏಕಿ‌ ಕಾಣಿಸಿಕೊಂಡ ಗುಂಡಿ ತಪ್ಪಿಸಲು ಕಾರನ್ನು ಬಲಬದಿಗೆ ತಿರುಗಿಸಿದ್ದಾನೆ. ಕಾರು ಡಿವೈಡರ್ ಮೇಲೆ‌ ಏರಿ ಎದುರಿನಿಂದ ಬರುತ್ತಿದ್ದ ಟೆಂಪೊ‌ ಮೇಲೆ ಹಾರಿದೆ. ಟೆಂಪೊ ಚಾಲಕ ಅಶೋಕ್ ಸ್ಥಳದಲ್ಲೇ ಮೃತಪಟ್ಟರೆ ಕಾರು ಚಾಲಕ ಗೌತಮ್ ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾನೆ. ಟೆಂಪೊದಲ್ಲಿದ್ದ ಕೂಲಿಕಾರ್ಮಿಕರು ಮಣಿಪಾಲ ಕೆಎಂಸಿಯಲ್ಲಿ ದಾಖಲಾಗಿದ್ದಾರೆ.ಈ ಬಗ್ಗೆ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು