ಶಿವಮೊಗ್ಗದಲ್ಲಿ ಬಂಧಿತ ಶಂಕಿತ ಉಗ್ರರ ಮೊಬೈಲ್ ಫೋನ್ ಬಿಚ್ಚಿಟ್ಟಿತು ಕರಾಳ ರಹಸ್ಯ! ಮುಸ್ಲಿಂ ಮೂಲಭೂತವಾದದತ್ತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಯುವಕರನ್ನು ಸೆಳೆಯುತ್ತಿದ್ದ ಮಂಗಳೂರು ಮೂಲದ ಬಂಧಿತ ಜಿಹಾದಿ ಉಗ್ರ ಮಾಜ್ ಮುನೀರ್ ಅಹಮ್ಮದ್..! – ಕಹಳೆ ನ್ಯೂಸ್
ಶಿವಮೊಗ್ಗ: ಶಿವಮೊಗ್ಗದಲ್ಲಿ ನಿನ್ನೆ (ಬುಧವಾರ) ಬಂಧಿಸಲ್ಪಟ್ಟ ಶಂಕಿತ ಉಗ್ರರ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಭಯಾನಕ ಸತ್ಯಗಳು ತಿಳಿದುಬಂದಿದೆ.
ಉಗ್ರ ಸಂಘಟನೆಗೆ ನಿರಂತರವಾಗಿ ನಡೆಯುತ್ತಿದ್ದ ನೇಮಕಾತಿಯ ಹೊಣೆಯನ್ನು ಈ ಶಂಕಿತ ಉಗ್ರರಾದ ಶಾರಿಕ್, ಮಾಜ್ ಹಾಗೂ ಯಾಸಿನ್ ಹೊತ್ತಿದ್ದರು ಎಂಬ ಅಂಶ ಬಯಲಾಗಿದೆ.
ಬಂಧಿತರಿಬ್ಬರ ಮೊಬೈಲ್ ಫೋನ್ ಚೆಕ್ ಮಾಡಿದಾಗ ಈ ಕರಾಳ ರಹಸ್ಯ ಬಯಲಿಗೆ ಬಂದಿದೆ.
ನಿಷೇಧಿತ ಆಯಪ್ಗಳ ಮೂಲಕ ಈ ಬಂಧಿತರು ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುತಿದ್ದುದು ತಿಳಿದುಬಂದಿದೆ. ಮುಸ್ಲಿಂ ಮೂಲಭೂತವಾದದತ್ತ ಯುವಕರನ್ನು ಇವರು ಸೆಳೆಯುತ್ತಿದ್ದರು. ನಿಷೇಧಿತ ಆಯಪ್ಗಳ ಮೂಲಕ ಗ್ರೂಪ್ ಕ್ರಿಯೇಟ್ ಮಾಡುತ್ತಿದ್ದ ಇವರು, ಗ್ರೂಪ್ಗಳಲ್ಲಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾಹಿತಿ ಶೇರ್ ಮಾಡುತ್ತಿರುವ ಅಂಶ ತಿಳಿದುಬಂದಿದೆ.
ಈ ಮಾಹಿತಿ ಬಗ್ಗೆ ಯಾರು ಪ್ರೇರೇಪಣೆಗೊಳ್ಳುತ್ತಿದ್ದರೋ ಆ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಶಂಕಿತ ಉಗ್ರರು, ತಮ್ಮ ಸಹಚರರ ಮೂಲಕ ಅಥವಾ ತಾವೇ ಖುದ್ದಾಗಿ ಆ ಯುವಕರನ್ನು ಭೇಟಿ ಮಾಡುತಿದ್ದರು. ನಂತರ ಯುವಕರ ಬ್ರೇನ್ವಾಶ್ ಮಾಡಿ ಉಗ್ರ ಸಂಘಟನೆಗೆ ಸೇರಿಸುತ್ತಿದ್ದ ಅಂಶ ತಿಳಿದುಬಂದಿದೆ. ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿರುವ ಶಂಕೆ ಇದ್ದು, ಈ ನಿಟ್ಟಿನಲ್ಲಿಯೇ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಂಗಳೂರು ಮೂಲದ ಮಾಜ್ ಮುನೀರ್ ಅಹಮ್ಮದ್, ಶಿವಮೊಗ್ಗ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸಿನ್ ಹಾಗೂ ತೀರ್ಥಹಳ್ಳಿ ಮೂಲದ ಶಾರೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರೂ ಶಿವಮೊಗ್ಗದಲ್ಲಿ ಪಿಯುಸಿ ಒಟ್ಟಿಗೆ ಮುಗಿಸಿದ್ದರು. ಬಳಿಕ ಇಂಜಿನಿಯರಿಂಗ್‌ಗೆ ಸೇರಿಕೊಂಡಿದ್ದರು. ಆದರೆ, ವ್ಯಾಸಂಗದ ಜತೆ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದರು ಎಂದೂ ಹೇಳಲಾಗುತ್ತಿದೆ.
ಕಳೆದ ತಿಂಗಳು ವೀರ್ ಸಾವರ್ಕರ್ ಕುರಿತು ಶಿವಮೊಗ್ಗದಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಶಿವಮೊಗ್ಗದ ಯುವಕ ಪ್ರೇಮ್ಸಿಂಗ್ಗೆ ಚಾಕು ಇರಿದ ಪ್ರಕರಣದ ಪ್ರಮುಖ ಆರೋಪಿ ಜಬಿ ಜೊತೆಗೂ ಯಾಸಿನ್ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.