Monday, January 20, 2025
ದಕ್ಷಿಣ ಕನ್ನಡರಾಜ್ಯಸಿನಿಮಾಸುದ್ದಿ

ಆಸ್ಕರ್‌ ಅವಾರ್ಡ್‌ಗೆ ಎಂಟ್ರಿಕೊಟ್ಟ ಉಪ್ಪಿನಂಗಡಿಯ ಹುಡುಗ ಪವನ್ ಭಟ್ ಎಡಿಟಿಂಗ್ ಮಾಡಿದ ಭಾರತದ ‘ಛೆಲ್ಲೋ ಶೋʼ ಸಿನಿಮಾ..! – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪಿನಂಗಡಿಯ ಹುಡುಗ ಪವನ್ ಭಟ್ ಎಡಿಟಿಂಗ್ ಮಾಡಿದ ಗುಜರಾತಿ ಸಿನಿಮಾ..!

ಆಸ್ಕರ್‌ ಅವಾರ್ಡ್‌ಗೆ ಎಂಟ್ರಿಕೊಟ್ಟ ಭಾರತದ 'ಛೆಲ್ಲೋ ಶೋʼ ಸಿನಿಮಾ

ನವದೆಹಲಿ: ಗುಜರಾತ್‌ನ “ಛೆಲ್ಲೋ ಶೋ’ ಸಿನಿಮಾವು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ಅಧಿಕೃತ ಎಂಟ್ರಿ ಪಡೆದಿದೆ. ಮಂಗಳವಾರ ಈ ಚಿತ್ರವನ್ನು ಆಯ್ಕೆ ಮಾಡಿ ಭಾರತದ ಫಿಲಂ ಫೆಡರೇಷನ್‌ ಮಂಗಳವಾರ ಈ ಪ್ರಕಟಣೆ ಹೊರಡಿಸಿದೆ.

ಅಕಾಡೆಮಿ ಅವಾರ್ಡ್‌ನಲ್ಲಿ ‘ಅತ್ಯುತ್ತಮ ವಿದೇಶಿ ಫೀಚರ್ ಸಿನಿಮಾ’ ವಿಭಾಗ ಅಡಿಯಲ್ಲಿ ‘ಚೆಲ್ಲೋ ಶೋʼ ಸಿನಿಮಾ ಆಯ್ಕೆಯಾಗಿದೆ. ‘ಚೆಲ್ಲೋ ಶೋʼ ಎಂದರೆ ‘ಕೊನೆಯ ಶೋ’ ಎಂಬ ಅರ್ಥವನ್ನು ಇದು ಹೊಂದಿದೆ.

ಪಾನ್‌ ನಳಿನ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, 9 ವರ್ಷದ ಬಾಲಕನೊಬ್ಬನಿಗೆ ಸಿನಿಮಾದ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು ವಿವರಿಸುತ್ತದೆ. ಈ ಸಿನಿಮಾ ಕಳೆದ ವರ್ಷ ಜೂನ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಆಗಿತ್ತು. ಭವಿನ್‌ ರಾಬರಿ, ಭವೇಶ್‌ ಶ್ರೀಮಲಿ, ರಿಚಾ ಮೀನಾ ಸೇರಿ ಅನೇಕರು ಅಭಿನಯಿಸಿರುವ ಸಿನಿಮಾ ಸ್ಪೇನ್‌ನ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಸ್ಪೈಕ್‌ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೇ ಅ.14ರಂದು “ಲಾಸ್ಟ್‌ ಫಿಲಂ ಶೋ'(ಇಂಗ್ಲಿಷ್‌) ಹೆಸರಿನಲ್ಲಿ ವಿಶ್ವಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮೊದಲೇ ಈ ಚಿತ್ರ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ಉಪ್ಪಿನಂಗಡಿಯ ಹುಡುಗ ಪವನ್ ಭಟ್ ಎಡಿಟಿಂಗ್ ಮಾಡಿದ ಗುಜರಾತಿ ಸಿನಿಮಾ..!

ಓದಿದ್ದು ಇಂಜಿನೀರಿಂಗ್. ಆಸಕ್ತಿ ಇದ್ದದ್ದು ಸಿನಿಮಾ ಎಡಿಟಿಂಗ್, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಹುಡುಗ ಪವನ್ ಭಟ್ ಎಡಿಟಿಂಗ್ ಮಾಡಿದ ಗುಜರಾತಿ ಸಿನಿಮಾ “ಛೆಲ್ಲೋ ಶೋ”ಈಗ ಆಸ್ಕರ್ ಗೆ ಪ್ರವೇಶ ಪಡೆದಿದೆ.

“ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಆಸ್ಕರ್‌ಗೆ ಆಯ್ಕೆಯಾಗಬಹುದೆನ್ನುವ ನಿರೀಕ್ಷೆಯಿತ್ತು. ಇದರೊಂದಿಗೆ ‘ಆರ್ ಆರ್ ಆರ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾವೂ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಳ್ಳಲಿದೆ, ಆಸ್ಕರ್ ಗೆಲ್ಲಲಿದೆ ಎಂದು ರಾಜಮೌಳಿ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಅನೇಕರು ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ‘ಆರ್ ಆರ್ ಆರ್’ ಚಿತ್ರಕ್ಕೆ ಅವಕಾಶ ನೀಡಲೇಬೇಕು ಎಂದು ಕೋರುತ್ತಿದ್ದಾರೆ.

ಕಳೆದ ಬಾರಿ ಆಸ್ಕರ್‌ಗೆ ಭಾರತದಿಂದ ತಮಿಳಿನ “ಕೂಳಂಗಲ್‌’ ಸಿನಿಮಾ ಆಯ್ಕೆಯಾಗಿತ್ತು. ಆದರೆ ಅದು ಅಂತಿಮ ಹಂತ ತಲುಪಲು ವಿಫ‌ಲವಾಗಿತ್ತು