Tuesday, January 21, 2025
ಸುದ್ದಿ

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಬಂದಾರು ವತಿಯಿಂದ ಸೆ.24 ಶನಿವಾರ ದಂದು ವಾರ್ಷಿಕ ಸಾಮಾನ್ಯ ಸಭೆ ಹಾಗೂ ಶಾಸಕ ಹರೀಶ್ ಪೂಂಜಾ ಹಾಗೂ ಗ್ರಾಮ ಪಂಚಾಯತ್ ಬಂದಾರು ಇವರಿಗೆ ಅಭಿನಂದನಾ ಸಮಾರಂಭ – ಕಹಳೆ ನ್ಯೂಸ್

ಬೆಳ್ತಂಗಡಿ: ಸೆ. 24ರಂದು ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಬಂದಾರು ಇವರ ವತಿಯಿಂದ ಸಂಘದ ಕಟ್ಟಡ ಅಭಿವೃದ್ಧಿಗೆ ಮತ್ತು ಅವರಣ ಗೋಡೆಗೆ ರೂ. 5 ಲಕ್ಷ ಅನುದಾನ ನೀಡಿದ ಬೆಳ್ತಂಗಡಿ ಶಾಸಕರಾದ ಸನ್ಮಾನ್ಯ ಶ್ರೀ ಹರೀಶ್ ಪೂಂಜರಿಗೆ ಮತ್ತು ಸಂಘದ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 1 ಲಕ್ಷ ಅನುದಾನ ನೀಡಿದ ಬಂದಾರು ಗ್ರಾಮ ಪಂಚಾಯತ್ ಗೆ ಅಭಿನಂದನಾ ಸಮಾರಂಭವು ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಜಯರಾಮ ರೈ ನೇರವೇರಿಸಲಿದ್ದು, ಬಂದಾರು ಹಾಲು ಉ.ಮ.ಸ ಸಂಘದ ಅಧ್ಯಕ್ಷರಾದ ಶ್ರೀಮತಿ ಮಮತಾ, ಕಳಂಜಿಮಾರು ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಜನಾರ್ದನ ಗೌಡ ಪುಯಿಲ, ಮಂಗಳೂರು ದ. ಕ. ಹಾಲು ಓಕ್ಕೂಟದ ನಿರ್ದೇಶಕರುಗಳಾದ ನಿರಂಜನ, ಭಾವಂತಬೆಟ್ಟು, ನಾರಾಯಣ ಪ್ರಕಾಶ, ಪದ್ಮನಾಭ ಶೆಟ್ಟಿ ಅರ್ಕಜೆ, ಬಂದಾರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಹಾಗೂ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ ಕಾರ್ಯನಿರ್ವಹಣಾಧಿಕಾರಿ, ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸರ್ವಸದಸ್ಯರು ಮತ್ತಿರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನಿವೃತ್ತ ವಿಸ್ತರಣಾಧಿಕಾರಿ ಶ್ರೀನಿವಾಸ ಎಂ. ಹಾಗೂ ಕೇಶವ, ಅಂಗಡಿಮಜಲು ಅವರಿಗೆ ಸನ್ಮಾನ ನಡೆಯಲಿದೆ.