Tuesday, January 21, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

PFI ರಾಷ್ಟ್ರೀಯ ಮಟ್ಟದ ಹುದ್ದೆ, ಭಯೋತ್ಪಾದಕರೊಂದಿಗೆ ನಂಟು – ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಿಹಾದಿ ಬಂಟ್ವಾಳದ ಬೋಳಂತೂರು ಮಹಮ್ಮದ್ ತಪ್ಸೀರ್ ಹೆಡೆಮುಕಟ್ಟಿದ NIA ಆಂಡ್ ಕರ್ನಾಟಕ ಪೋಲೀಸ್..! – ಕಹಳೆ ನ್ಯೂಸ್

ಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ನಲ್ಲಿ ನಡೆದ ರಾಜ್ಯದಲ್ಲಿ ಸಂಚಲನ ಮೂಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೊಳಂತೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಯ ದೃಷ್ಟಿಯಿಂದ ಬೆಂಗಳೂರು ಪೋಲಿಸರಿಗೆ ಒಪ್ಪಿಸಿದ್ದಾರೆ.
ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಅವರ ಪುತ್ರ ಮಹಮ್ಮದ್ ತಪ್ಸೀರ್ ಎಂಬಾತನ್ನು ಪೋಲೀಸರು ದೀರ್ಘಕಾಲದ ವಿಚಾರಣೆ ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ವಿವರ :
ಬಂಟ್ವಾಳ ತಾಲೂಕಿನ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ಎಂಬಾತನನ್ನು ಬಂಟ್ವಾಳ , ವಿಟ್ಲ ಪೋಲೀಸರು ಇಂದು ಸುಮಾರು 11.35 ರ ವೇಳೆ ವಶಕ್ಕೆ ಪಡೆದುಕೊಂಡು ಬಂಟ್ವಾಳಕ್ಕೆ ಕರೆತಂದಿದ್ದಾರೆ.ಅಬಳಿಕ ರಾಜ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ವರ್ಷ ಬೆಂಗಳೂರಿನ ಕೆ.ಜೆ.ಡಿ.ಜೆ.ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂದಲೆ ನಡೆಸಿ ಅ ಬಳಿಕ ಪೋಲಿಸ್ ಠಾಣೆಗೆ ನುಗ್ಗಿಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೋಲೀಸರ ತಂಡ ತನಿಖೆ ನಡೆಸುತ್ತಿತ್ತು . ಅಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ತಪ್ಸೀರ್ ಕೂಡ ಭಾಗಿಯಾಗಿದ್ದ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.

ಕೆ.ಜೆ.ಹಳ್ಳಿ ಡಿ.ಜೆ ಹಳ್ಳಿ ಪ್ರಕರಣಕ್ಕೆ ಆರಂಭದಲ್ಲಿ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿದ್ದ ಎಂಬ ಆರೋಪದಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ.
ಸಂಘಟನೆಯ ಪ್ರಮುಖ
ತಪ್ಸೀರ್ ಪಿ.ಎಫ್.ಐ‌.ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿ ಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು,ಬೋಳಂತರಿನಲ್ಲಿ ವಾಸವಾಗಿದ್ದ.
ಮುಂಜಾನೆ 3.30 ಕ್ಕೆ ದಾಳಿ
ಬಂಟ್ವಾಳ ಹಾಗೂ ವಿಟ್ಲ ಪೋಲಿಸರ ತಂಡ ಮುಂಜಾನೆ ಮೂರು ಗಂಟೆಗೆ ರಾಜ್ಯದ ಪೋಲೀಸರು ನೀಡಿದ ವಿಳಾಸದಂತೆ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದಲ್ಲಿರುವ ಈತನ ದೊಡ್ಡಪ್ಪ ನ ಮನೆಗೆ ಈತನ ಮನೆ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ಹೋದಾಗ ಇಲ್ಲಿ ಈತ ಇಲ್ಲ ಬೊಳಂತೂರಿನಲ್ಲಿ ವಾಸವಾಗಿದ್ದಾನೆ.ಆದರೆ ಈತನ. ವಿಳಾಸ ಮಾತ್ರ ದೊಡ್ಡಪ್ಪನ ಮನೆಯದ್ದು ನೀಡಿದ್ದ ಎಂಬುದು ಗೊತ್ತಾದ ಬಳಿಕ ರೈಡ್ ಮಾಡಲಾಯಿತು.
ಅಗತ್ಯ ದಾಖಲೆಗಳ ಸಹಿತ ಆರೋಪಿ ಮೊಬೈಲ್ ಜೊತೆ ಮನೆಯವರ ಮೊಬೈಲ್ ಗಳನ್ನು ಪೋಲೀಸರು ‌ವಶಕ್ಕೆ ಪಡೆದುಕೊಂಡಿದ್ದಾರೆ.
*ಗೋ *ಬ್ಯಾಕ್* ಗೋಬ್ಯಾಕ್*

ಬೆಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸರ ನಿರ್ದೇಶನದಂತೆ ಬಂಟ್ವಾಳ ಪೋಲೀಸರ ತಂಡ ಮನೆಗೆ ದಾಳಿ ನಡೆಸಿದಾಗ ಸ್ಥಳೀಯ ಸಂಘಟನೆಯ ಪ್ರಮುಖರು ಮನೆ ಮುಂದು ಸುಮಾರು 250 ಕ್ಕೂ ಅಧಿಕ ಜನರ ತಂಡ ಎನ್. ಐ.ಎ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.
ಆದರೆ ನಾವು ಬಂಟ್ವಾಳ ಪೋಲೀಸರು ಎನ್.ಐ.ಎ.ಅಲ್ಲ ಎಂಬ ವಿಚಾರ ತಿಳಿದು ಬಳಿಕ ಯಾಕೆ ಬಂದಿದ್ದು, ಯಾವ ವಿಚಾರ ನಮಗೆ ತಿಳಿಸಬೇಕು ಎಂದು ಒತ್ತಾಯ ಮಾಡಿದಾಗ ಪೋಲೀಸರ ಭಾಷೆಯಲ್ಲಿ ಸಮಜಾಯಿಷಿ ನೀಡಿದರು.
ತಮ್ಮನ ಮದುವೆ
ಬಂಧಿತನಾದ ತಪ್ಸೀರ್ ಮನೆ ಮದುವೆ ಯ ಸಂಭ್ರಮ ದಲ್ಲಿದೆ.ಈತ ನ ಸಹೋದರ ನ ಮದುವೆ ಗಾಗಿ ಎಲ್ಲಾ ಪೂರ್ವ ತಯಾರಿಗಳು ನಡೆಯುತ್ತಿದೆ .
ಆದರೆ ಈ ಮಧ್ಮ್ಯೆ ಈತನ ಬಂಧನವಾಗಿರುವುದು ಕುಟುಂಬದ ಸದಸ್ಯರಿಗೆ ದುಃಖ ತಂದಿದೆ.

ರಾಜ್ಯ ಪೋಲೀಸ್ ನಿರ್ದೇಶನದ ಂತೆ ಬಂಟ್ವಾಳ ಡಿವೈಎಸ್.ಪಿ.ಪತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಗ್ರಾಮಾಂತರ ಇನ್ಸ್ ಪೆಕ್ಟರ್ ಟಿ.ಡಿ‌.ನಾಗರಾಜ್.ಪಿ ಎಸ್.ಐ.ಗಳಾದ ಅವಿನಾಶ್, ಹರೀಶ್, ಕಲೈಮಾರ್, ಸಂದೀಪ್, ಹಾಗೂ ಸಿಬ್ಬಂದಿ ವರ್ಗ,ಕೆ.ಎಸ್.ಆರ್‌ಪಿ ಪೋಲಿಸರ ತಂಡ ಕಾರ್ಯಚರಣೆ ನಡೆಸಿತ್ತು.