Wednesday, January 22, 2025
ಸುದ್ದಿ

ಸೆ.24ರಂದು 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜನಸಮೃದ್ಧಿ ಸಮೂಹ ಸಂಸ್ಥೆಯ ಷೇರುದಾರರ, ಗ್ರಾಹಕರ, ಸಲಹೆಗಾರರ ವಿಶೇಷ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ರಾಜ್ಯ ಸರಕಾರದ ಸಹಕಾರಿ ಇಲಾಖೆಯ ಕಾಯ್ದೆ 1959ರ ಅಧಿನಿಯಮಕ್ಕೆ ಒಳಪಟ್ಟಿರುವ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ., ಜನಸಮೃದ್ಧಿ ಹೌಸಿಂಗ್ ಕೋ-ಆಪರೇಟವ್ ಸೊಸೈಟಿ ಲಿ., ಜನಸಮೃದ್ಧಿ ಮಾರ್ಟ್ ಲೈಫ್ ಸ್ಟೈಲ್ ಇಂಡಿಯಾ ಪ್ರೈ. ಲಿ., 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪುತ್ತೂರು, ವಿಟ್ಲ, ಬೆಳ್ತಂಗಡಿ, ಸುಳ್ಯ ಮತ್ತು ಕುಂದಾಪುರ ಶಾಖೆಯ ಷೇರುದಾರರ, ಗ್ರಾಹಕರ, ಸಲಹೆಗಾರರ ವಿಶೇಷ ಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ.24ರಂದು ಪುತ್ತೂರಿನ ನೆಹರುನಗರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಜನಸಮೃದ್ಧಿ ಸಮೂಹ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾಗಿರುವ ರಾಮು ಎಂ ಅವರು ಅಧ್ಯಕ್ಷತೆ ವಹಿಸಲಿದ್ದು, ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಇನ್ನು ಮುಖ್ಯ ಅತಿಥಿಗಳಾಗಿ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ., ನ ಉಪಾಧ್ಯಕ್ಷರಾದ ಪದ್ಮರಾಜು ಸಿ. ಎನ್, ಶ್ರೀಯುತ ರಾಜೇಶ್ ಎನ್. ಎಮ್. ನಿರ್ದೇಶಕರಾದ ಗಿರೀಶ್ ಎನ್., ನಾಗರಾಜ್ ಬಿ. ಆರ್., ಸುರೇಶ್ ಎಸ್. ಶೆಟ್ಟಿ, ನಿತ್ಯಾನಂದ ಕೊಟ್ಟಾರಿ, ವಿನೋದ್ ಪಿ. ಹಾಗೂ ಜನಸಮೃದ್ಧಿ ಸಮೂಹ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಸಲಹೆಗಾರರು, ಸದಸ್ಯರು ಮತ್ತು ಸಿಬ್ಬಂದಿವರ್ಗದವರು ಭಾಗವಹಿಸಲಿದ್ದಾರೆ.