ಪುತ್ತೂರು: “ಕಾಲೇಜಿನ ಹಿತರಕ್ಷಣೆ,ವಿದ್ಯಾರ್ಥಿಗಳ ಶಿಸ್ತು ಕಾಪಾಡುವಲ್ಲಿ ಹೆತ್ತವರ ಭಾಗವಹಿಸುವಿಕೆ ಅತೀ ಅವಶ್ಯ.ವಿದ್ಯಾರ್ಥಿಗಳ ಕಲಿಕಾಗತಿಯನ್ನು ಪರಿಶೀಲಿಸುತ್ತಿರಬೇಕು ಮತ್ತು ಅದಕ್ಕಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.”ಎಂದು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ರಾಮಕುಂಜ ಇದರ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2022-23 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
“ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಮರ್ಥವಾಗಿ ಸವಾಲುಗಳನ್ನು ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಯ ತರಬೇತಿಯೊಂದಿಗೆ ಹೆತ್ತವರ ಸೂಕ್ತ ಮಾರ್ಗದರ್ಶನವೂ ಬೇಕು.ಈ ನಿಟ್ಟಿನಲ್ಲಿ ಈ ಸಂಘಕ್ಕೆ ಹೆಚ್ಚಿನ ಮಹತ್ವ ಇದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕರು ಹಾಗೂ ಶಿಕ್ಷಕರು ಸ್ಪಂದಿಸಲು ರಕ್ಷಕ-ಶಿಕ್ಷಕ ಸಂಘವು ಮಾಧ್ಯಮವಾಗಬೇಕು.”ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಳೆದ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗೌಡರವರು ಮಾತನಾಡುತ್ತಾ“ವಿದ್ಯಾರ್ಥಿಗಳ ಭವಿಷ್ಯವನ್ನು ಸದೃಢಗೊಳಿಸಲು ಆಡಳಿತ ಮಂಡಳಿ ಬದ್ಧವಾಗಿದೆ.ಅದರ ಜೊತೆಗೆ ರಕ್ಷಕ-ಶಿಕ್ಷಕರೆಲ್ಲರ ಗುರಿಯೂ ಒಂದೇ ಆಗಿದ್ದು ಸರ್ವರೀತಿಯಲ್ಲೂ ಎಲ್ಲರ ಸಹಕಾರಅಗತ್ಯ.”ಎಂದು ಹೇಳಿದರು.
ನೂತನರಕ್ಷಕ-ಶಿಕ್ಷಕ ಸಂಘದಅಧ್ಯಕ್ಷರಾಗಿಆಯ್ಕೆಯಾದ ಸತ್ಯನಾರಾಯಣ ಬಿ,ರವರು ಮಾತನಾಡುತ್ತಾ ಕಾಲೇಜಿನ ಅಭಿವೃದ್ಧಿಗಾಗಿ ರಕ್ಷಕ-ಶಿಕ್ಷಕ ಸಂಘವು ಇನ್ನಷ್ಟು ಬಲ ತುಂಬುವ ಪ್ರಯತ್ನವನ್ನು ಮಾಡುತ್ತದೆ. ಎಂದು ಎಲ್ಲರ ಸಹಕಾರವನ್ನು ಕೋರಿದರು.
2022-23 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸತ್ಯನಾರಾಯಣ ಬಿ,ಉಪಾಧ್ಯಕ್ಷರಾಗಿ ಶ್ರೀಮತಿ ಜಯಂತಿ, ತೀರ್ಥಾನಂದ, ಮಕ್ಕಳ ರಕ್ಷಣಾ ಅಧಿಕಾರಿಯಾಗಿ ಶ್ರೀಮತಿ ಕಮಲಾಕ್ಷಿ, ಸದಸ್ಯರಾಗಿ ಸತೀಶ ಕಲ್ಲುರಾಯ, ದಿವಾಕರ ಬಲ್ಲಾಳ್, ಶ್ರೀಮತಿ ಸುರೇಖ, ಶ್ರೀಮತಿ ವೇದಾವತಿ, ಶ್ರೀಮತಿ ಜ್ಯೋತಿ ಆರ್.ಭಟ್., ರಾಮ ನಾಯ್ಕ, ಈಶ್ವರ ಭಟ್ , ಶ್ರೀಮತಿ ಅಶ್ವಿನಿ ಪ್ರವೀಣ್, ಶ್ರೀಮತಿ ಚಂದ್ರಕಲಾ, ಶ್ರೀಮತಿ ಅಶ್ವಿನಿ ಬಿ.ಕೆ., ಐತಪ್ಪ ಆಯ್ಕೆಯಾದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ,ಸಂಚಾಲಕರಾದ ಸಂತೋಷ ಬಿ., ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಸಂಸ್ಥೆಯ ಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ಪೋಷಕರ ಮುಂದೆ ಇರಿಸಿದರು.ಸಂಘದ ಕಾರ್ಯದರ್ಶಿಯ ನೆಲೆಯಲ್ಲಿ ವಾರ್ಷಿಕ ವರದಿಯನ್ನು ನೀಡಿದರು. ಉಪನ್ಯಾಸಕರಾದ ಶ್ರೀಮತಿ ಪ್ರಭಾವತಿ ವಂದಿಸಿದರು. ಶ್ರೀಮತಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.