ಅನೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವನ್ನು ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೃಹ ಸಚಿವರಾದ ಅರಗ ಜ್ಞಾನೇಂದ ಇವರಿಗೆ ಮನವಿ – ಕಹಳೆ ನ್ಯೂಸ್
ಬೆಂಗಳೂರು : 2006 ರಲ್ಲಿ ಕೇರಳದಲ್ಲಿ ಸ್ಥಾಪನೆಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಹೆಸರಿನ ಸಂಘಟನೆಯ ಜಾಲವು ಈಗ ಕರ್ನಾಟಕ ಸೇರಿ ದೇಶದಾದ್ಯಂತ ಹರಡಿದೆ. ಈ ಸಂಘಟನೆಯು ಅನೇಕ ದೇಶದ್ರೋಹಿ ಮತ್ತು ಸಮಾಜದ್ರೋಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಪ್ರವೀಣ ನೆಟ್ಟಾರು, ಹರ್ಷ, ರುದ್ರೇಶ್, ಶರತ್ ಮಡಿವಾಳ ಸೇರಿ 15 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದ ಆರೋಪ ಪಟ್ಟಿಯಲ್ಲಿ ಪಿಎಫ್‌ಐ ಭಾಗಿಯಾಗಿದೆ. ಇಡೀ ರಾಜ್ಯದಲ್ಲಿ ಹತ್ಯೆ, ಧಂಗೆ, ಕೋಮು ಪ್ರಚೋಧನೆ, ದ್ವೇಷದ ಪ್ರಚಾರ, ಭಯೋತ್ಪಧನಾ ತರಬೇತಿ ಕೇಂದ್ರ ನಡೆಸುವುದು ಮುಂತಾದ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಕಾನೂನು ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾಗಿದೆ. ಈ ದೃಷ್ಟಿಕೋನದಿಂದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವನ್ನು ನಿಷೇಧ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಇಂದು ಮಾನ್ಯ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ಇವರಲ್ಲಿ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ಹಿಂದೂ ನಾಯಕರಾದ ಶ್ರೀ. ಕಣ್ಣನ್, ಶ್ರೀ. ಗೋಪಿ ಕೆ, ವಕೀಲರಾದ ತ್ಯಾಗರಾಜ ಮತ್ತಿತರರು ಉಪಸ್ಥಿತರಿದ್ದರು.
ಮನವಿಯಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಭಾರತದಲ್ಲಿ ನಿಷೇಧಿಸಲ್ಪಟ್ಟ ‘SIMI’ ಅಂದರೆ ‘ಸ್ಟೂಡೆಂಟ್ಸ್ ಇಸ್ಲಾಮಿಕ ಮೂವ್ಹಮೆಂಟ ಆಫ್ ಇಂಡಿಯಾ ಈ ಭಯೋತ್ಪಾದಕ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದನು ಮತ್ತು ಅಬ್ದುಲ್‌ಹಮೀದ್ ಕೇರಳ ರಾಜ್ಯ ‘ಸಿಮಿ’ ಭಯೋತ್ಪಾದಕ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿದ್ದನು. ಏಪ್ರಿಲ್ 2013 ರಲ್ಲಿ, ಕೇರಳ ಪೊಲೀಸರು ನಾರತ್, ಕಣ್ಣೂರಿನ ತರಬೇತಿ ಶಿಬಿರದ ಮೇಲೆ ಮುತ್ತಿಗೆ ಹಾಕಿದರು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೧ ಕಾರ್ಯಕರ್ತರನ್ನು ಬಂಧಿಸಿದ್ದರು. ನಾಡ(ದೇಶಿ) ಬಾಂಬ್‌ಗಳು, ಕತ್ತಿಗಳು, ಬಾಂಬ್‌ಗಳನ್ನು ತಯಾರಿಸುವಂತಹ ಕಚ್ಚಾ ವಸ್ತುಗಳು ಮತ್ತು ‘ಪಿಎಫ್‌ಐ,’ ನ ಪತ್ರಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ೨೧ ಕಾರ್ಯಕರ್ತರ ಮೇಲೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (UAPA) ಅಡಿಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಅಪರಾಧಗಳನ್ನು ನಮೂದಿಸಲಾಗಿದೆ. ಅದಲ್ಲದೇ ಕಳೆದ ತಿಂಗಳು ಬಿಹಾರದ ಪಿಎಪ್‌ಐ ಕಾರ್ಯಾಲಯದ ಮೇಲೆ ಪೋಲಿಸರು ದಾಳಿ ಮಾಡಿದಾಗ ಭಾರತವನ್ನು 2047 ರ ಒಳಗೆ ಇಸ್ಲಾಮಿಕರಣ ಮಾಡುವ ಷಡ್ಯಂತ್ರ್ಯದ ಬರಹಗಳು ಸಹ ದೊರೆತಿದೆ. ಬೆಂಗಳೂರು ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ದಂಗೆ ಪ್ರಕರಣದಲ್ಲಿ ‘ಪಿಎಫ್‌ಐ’ ಸಂಘಟನೆಯ ಕೈವಾಡವಿರುವದನ್ನು ರಾಷ್ಟ್ರೀಯ ತನಿಖಾ ದಳ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. 2012 ರಲ್ಲಿ, ಕೇರಳ ಸರಕಾರವು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಕುರಿತು ಕೇರಳ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಅದರಲ್ಲಿ ಈ ಸಂಘಟನೆಯು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಇದು ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವಮೆಂಟ ಆಫ್ ಇಂಡಿಯಾ ಅಂದರೆ ‘ಸಿಮಿ’ಯನ್ನು ಪುನರುಜ್ಜೀವನಗೊಳಿಸಿದಂತಿದೆ ಎಂದು ಹೇಳಿತ್ತು . ಕೇಂದ್ರ ಸರಕಾರ ಸಿಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳಿ ಅದನ್ನು ನಿಷೇಧಿಸಿದೆ. ಈ ಸಂಘಟನೆಯು ವಿವಿಧ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ಸಿಪಿಐ ಸಂಘಟನೆಯ 27 ಜನರನ್ನು ಹತ್ಯೆಗೈದ, 8 ಜನರನ್ನು ಕೊಲ್ಲಲು ಪ್ರಯತ್ನಿಸಿದ ಮತ್ತು ಧಾರ್ಮಿಕ ಹಿಂಸಾಚಾರದ ಘಟನೆಗಳಲ್ಲಿ 106 ಪ್ರಕರಣಗಳು ದಾಖಲಾಗಿದೆ, ಜೊತೆಗೆ ಈ ಸಂಘಟನೆಯು ಅಪಹರಣ, ಗಲಭೆಗಳನ್ನು ಪ್ರಚೋದಿಸುವುದು ಇತ್ಯಾದಿ. ದೇಶದ್ರೋಹಿ ಕೃತ್ಯಗಳಲ್ಲಿ ಕೂಡ ಭಾಗಿಯಾಗಿದೆ. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸದಸ್ಯರು ಫೇಸ್‌ಬುಕ್‌ನಲ್ಲಿ ‘ಐಸಿಸ್ ನ ಸಮರ್ಥಕರು’ ಎಂದು ಬಹಿರಂಗಗೊಂಡಿದೆ ಮತ್ತು ಅವರು ‘ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ’, ‘ಹಿಜ್ಬುಲ್ ಮುಜಾಹಿದ್ದೀನ್’, ‘ಲಷ್ಕರ್-ಎ-ತೊಯ್ಬಾ’ ಮತ್ತು ‘ಅಲ್-ಕಾಯದಾ’ ಜೊತೆ ಸಹ ಸಂಬಂಧ ಹೊಂದಿದ್ದರು ಎಂಬುದು ಬಹಿರಂಗವಾಗಿದೆ. ಪೌರತ್ವ ಸುಧಾರಣಾ ಕಾಯ್ದೆ (CAA) ವಿರುದ್ಧ ಉತ್ತರ ಪ್ರದೇಶದಲ್ಲಿ ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಪ್ರಕರಣದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ 108 ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದರು. ಅದಕ್ಕಾಗಿಯೇ ಉತ್ತರ ಪ್ರದೇಶ ಸರಕಾರವು ಈ ಸಂಘಟನೆಯನ್ನು ನಿಷೇಧಿಸುವ ಪ್ರಕ್ರಿಯೆ ಆರಂಭಿಸಿದೆ. ಈ ಎಲ್ಲ ವಿಷಯಗಳ ಗಾಂಭೀರ್ಯವನ್ನು ಸ್ಪಷ್ಟಪಡಿಸುತ್ತಾ ಇದರ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಎಲ್ಲಾ ಅಂಗ ಸಂಸ್ಥೆಗಳ ಮೇಲೆ ತಕ್ಷಣವೇ ನಿಷೇಧ ಹೇರಬೇಕು. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಎಲ್ಲಾ ಪದಾಧಿಕಾರಿಗಳ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣದಿಂದಾಗಿ, ಅಪರಾಧವನ್ನು ನಮೂದಿಸಿ ಅವರನ್ನು ಬಂಧಿಸಬೇಕು. ಪಿಎಫ್‌ಐ ನ ಎಲ್ಲಾ ಕಛೇರಿಗಳಿಗೆ ಬೀಗ ಹಾಕುವ ಮೂಲಕ ಅವರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಕೂಲಂಕುಷವಾಗಿ ವಿಚಾರಣೆ ಮಾಡುವ ಮೂಲಕ, ಅವರು ಯಾವ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಅವರು ವಿದೇಶಗಳಿಂದ ಪಡೆದ ಮೊತ್ತ, ಅವರ ಹಿಂದಿನ ಷಡ್ಯಂತ್ರಗಳನ್ನು ಕಂಡುಹಿಡಿದು ಪಿಎಫ್‌ಐ ನಿಷೇಧ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.