Wednesday, January 22, 2025
ಸುದ್ದಿ

ಮಂಗಳೂರು : ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣ : ಕೊಯಮತ್ತೂರಿನತ್ತ ಮಂಗಳೂರು ಪೊಲೀಸರು – ಕಹಳೆ ನ್ಯೂಸ್

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಪೊಲೀಸರರು ತಂಡವೊAದನ್ನು ಮಾಡಿದ್ದು, ಇದೀಗ ತಮಿಳುನಾಡಿನ ಕೊಯಮತ್ತೂರಿನತ್ತ ತೆರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಈ ಕಾಲೇಜು ಆವರಣದಲ್ಲೇ ಇರುವ ಹಾಸ್ಟೆಲ್ ನಿಂದ ಬುಧವಾರ “ಕ್ಷಮಿಸಿ” ಎನ್ನುವ ಪತ್ರ ಬರೆದಿಟ್ಟು ಕಿಟಿಕಿಯ ಸಲಾಕೆಯನ್ನು ಮುರಿದು ಆ ಮೂಲಕ ಮುಂಜಾನೆ 3 ಗಂಟೆ ವೇಳೆಗೆ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು.

ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರು, ಒಬ್ಬರು ಚಿಕ್ಕಮಗಳೂರಿನವರು. ಹಾಸ್ಟೆಲ್‌ನಿಂದ ಹೊರ ಹೋಗುತ್ತಿರುವ ದೃಶ್ಯ ಕಾಲೇಜಿನ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು.

ಎರಡು ದಿನವಾದರೂ ವಿದ್ಯಾರ್ಥಿನಿಯರ ಸಣ್ಣ ಸುಳಿವು ಸಿಗಲಿಲ್ಲ. ಆದರೆ ಇದೀಗ ಮಹತ್ವದ ಮಾಹಿತಿಯು ಪೊಲೀಸರಿಗೆ ಸಿಕ್ಕಿದೆ. ವಿದ್ಯಾರ್ಥಿನಿಯರು ರೈಲಿನ ಮೂಲಕ ತಮಿಳುನಾಡಿನ ಕೊಯಮುತ್ತೂರಿಗೆ ಹೋಗಿದ್ದಾರೆ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ನಿಟ್ಟಿನಲ್ಲಿ ಶೋಧ ಕಾರ್ಯಕ್ಕೆ ಕಂಕನಾಡಿ ಪೊಲೀಸರ ತಂಡ ಅಲ್ಲಿಗೆ ತೆರಳಿದೆ.