Sunday, January 19, 2025
ಉಡುಪಿಕಾಸರಗೋಡುಕೊಡಗುಕ್ರೈಮ್ದಕ್ಷಿಣ ಕನ್ನಡಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ದಕ್ಷಿಣ ಕನ್ನಡ‌, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಪ್ಲಾನ್..! : ಕೇರಳದಲ್ಲಿ ಬಂಧಿತ PFI ಕಾರ್ಯಕರ್ತನ ಪೆನ್‌ಡ್ರೈವ್‌ನಲ್ಲಿ ಸ್ಫೋಟಕ ಮಾಹಿತಿ – ಕಹಳೆ ನ್ಯೂಸ್

ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಕಚೇರಿಗಳ ಮೇಲೆ ಎನ್​ಐಎ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬಂಧಿತ, PFI ಕಾರ್ಯಕರ್ತರನ್ನು ವಿಚಾರಣೆ ನಡೆಸಿದ ಪೋಲೀಸರಿಗೂ ಶಾಕ್ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ‌, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಪ್ಲಾನ್..!

ಕೇರಳದಲ್ಲಿ ಬಂಧಿತ PFI ಕಾರ್ಯಕರ್ತನ ಪೆನ್‌ಡ್ರೈವ್‌ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ದಕ್ಷಿಣ ಕನ್ನಡ‌, ಕೊಡಗು, ಉಡುಪಿ ಮೂಲದ Rss ಹಾಗೂ ಬಿಜೆಪಿ ನಾಯಕರ ಹತ್ಯೆಗೆ ಪ್ಲಾನ್ ರೂಪಿಸಲಾಗಿದ್ದು, ನಾಯಕರ ಫೋಟೋ, ವಿವರ, ಮನೆ ಹಾಗೂ ಕಛೇರಿ ವಿಳಾಸ, ಮಾರ್ಗಸೂಚಿ ಇತ್ಯಾದಿಗಳು ಪತ್ತೆಯಾಗಿದ್ದು, ಭೀರಕ ಸಂಚು ಬಯಲಾಗಿದೆ.

https://fb.watch/fJspUjFUme/

ಪಿಎಫ್​ಐ ಪ್ರತಿಭಟನೆಗೆ ಹೈಕೋರ್ಟ್​ ಕೆಂಡಾಮಂಡಲ: ಸ್ವಯಂ ಪ್ರೇರಿತ ದೂರು ದಾಖಲು- ನ್ಯಾಯಾಂಗ ನಿಂದನೆ ಎಚ್ಚರಿಕೆ :

ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಬಂದ್​ಗೆ ಕರೆ ನೀಡಿದೆ. ಈ ಕ್ರಮಕ್ಕೆ ಕೇರಳ ಹೈಕೋರ್ಟ್​ ಕೆಂಡಾಮಂಡಲವಾಗಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಸಂಘಟನೆಗಳು ಇಸ್ಲಾಂ ಧರ್ಮದ ತೀವ್ರವಾದಿ ಸಂಘಟನೆಗಳಾಗಿವೆ. ಆದರೆ ಈ ಸಂಘಟನೆಗಳನ್ನು ಏಕೆ ಈವರೆಗೆ ನಿಷೇಧಿಸಲಾಗಿಲ್ಲ ಎಂದು ಕಳೆದ ಮೇ ತಿಂಗಳಿನಲ್ಲಿ ವಿಚಾರಣೆಯೊಂದರ ವೇಳೆ ಕೇರಳ ಹೈಕೋರ್ಟ್ ಪ್ರಶ್ನಿಸಿತ್ತು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವುಗಳ ಮೇಲೆ ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದೀಗ ಪಿಎಫ್​ಐ ಪ್ರತಿಭಟನೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಕೋರ್ಟ್​ ದೂರು ದಾಖಲಿಸಿಕೊಂಡು, ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದೆ. ‘ಯಾರೂ ಅನುಮತಿಯಿಲ್ಲದೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಇದಾಗಲೇ ಹಲವು ತೀರ್ಪುಗಳಲ್ಲಿ ಕೋರ್ಟ್​ಗಳು ಹೇಳುತ್ತಲೇ ಬಂದಿವೆ. ಹೀಗಿರುವಾಗ ಪಿಎಫ್​ಐ ಹೇಗೆ ಪ್ರತಿಭಟನೆ ಮಾಡಿ ಬಂದ್​ಗೆ ಕರೆ ನೀಡಿದೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ‘ಕೋರ್ಟ್​ ಆದೇಶವನ್ನು ಉಲ್ಲಂಘನೆ ಮಾಡಿರುವ ಈ ಸಂಘಟನೆ ಈಗ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರನ್​ ನಂಬಿಯಾರ್​ ನೇತೃತ್ವದ ಪೀಠ ಹೇಳಿದೆ.

‘ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶಾದ್ಯಂತ ತೀವ್ರವಾದದ ಸಿದ್ಧಾಂತಗಳನ್ನು ಪ್ರಚುರ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಾಗಿವೆ. ಈ ಸಂಘಟನೆಗಳು ಭಾರತದ ಹೊರಗೆ ಸಹ ಬೇರುಗಳನ್ನು ಹೊಂದಿವೆ. ದಬ್ಬಾಳಿಕೆ ಮತ್ತು ಬೆದರಿಕೆಯ ಮೂಲಕ ಅವರು ಇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರಿಸುವಲ್ಲಿ ತೊಡಗಿದ್ದಾರೆ’ ಎಂದು ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದರು. (ಏಜೆನ್ಸೀಸ್​)